SIRA : ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಕೆ ಪಾಳ್ಯದ ಮನೆ ಮನೆ ಗಂಗೆಗೆ ಗ್ರಾಮಸ್ಥರೇ ಚಾಲನೆ ನೀಡಿ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದಿದ್ದಾರೆ, ಹೌದು ಮನೆ ಮನೆ ಗಂಗೆ ಯೋಜನೆಯ ನಲ್ಲಿಗಳಿಗೆ ಗ್ರಾಮಸ್ಥರೇ ಚಾಲನೆ ನೀಡಿ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆ ಗಂಗೆ ಯೋಜನೆಯನ್ನು ಅನುಷ್ಠಾನ ಮಾಡಲಾಗಿತ್ತು. ಆದರೆ ಅನುಷ್ಠಾದ ಬಳಿಕ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ (PRAJA SHAKTHI TV) ವರದಿ ಕೂಡ ಮಾಡಲಾಗಿತ್ತು. ಇದಾದ ಬಳಿಕವೂ ನೀರು ಸರಬರಾಜು ಆಗ್ತಿರಲಿಲ್ಲ. ಹೀಗಾಗಿ ಗ್ರಾಮಸ್ಥರೇ ಪೂಜೆ ಸಲ್ಲಿಸಿ ಮನೆ ಮನೆ ಗಂಗೆಯ ನೀರಿಗೆ ಚಾಲನೆ ನೀಡಿದರು.