ಬೆಂಗಳೂರು:
ಎಣ್ಣೆ ಚಟಕ್ಕೆ ಬಿದ್ದವರು ಹಣ ಇಲ್ಲದ ಸಮಯದಲ್ಲಿ ಏನು ಬೇಕಾದ್ರೂ ಮಾಡಿ ಕುಡಿಯೋದರ ಬಗ್ಗೆ ಯೋಸಿಸುತ್ತಾರೆ. ಪಾಪಿ ಮಗನೊಬ್ಬ ಕುಡಿಯೋಕೆ ಹಣ ಕೊಟ್ಟಿಲ್ಲ ಅಂತಾ ತಾಯಿಗೆ ಚಾಕು ಇರಿದು ಆಕೆಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ಕೊಂಡು ಹೋಗಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಹುಲ್ ಅಲಿಯಾಸ್ ಕಲರ್ಸ್ ಚಿನ್ನದ ಸರ ದೋಚಿದ ಪಾಪಿ. ಕುಡಿತದ ಚಟಕ್ಕೆ ಬಿದ್ದಿದ್ದ ರಾಹುಲ್, ಅಮ್ಮನಿಂದ ಆಗಾಗ ಹಣ ಪಡೆಯುತ್ತಿದ್ದ. ತಾಯಿ ಜಯಲಕ್ಷ್ಮಿ ಕೂಲಿ ಕೆಲಸ ಮಾಡಿ ಮಗನ ಖರ್ಚಿಗೆ ಅಂತಾ ಒಂದಷ್ಟು ಹಣವನ್ನು ನೀಡುತ್ತಿದ್ದಳು. ಅಮ್ಮ ನೀಡುತ್ತಿದ್ದ ಹಣದಲ್ಲಿ ಕುಡಿಯಲು ಶುರುಮಾಡಿದ್ದ. ಮಗ ಕುಡಿತದ ಚಟಕ್ಕೆ ಬಿದ್ದಿದ್ದಾನೆ ಅಂತಾ ತಿಳಿದ ಅಮ್ಮ, ಕಳೆದ ಎರಡ್ಮೂರು ದಿನಗಳಿಂದ ಖರ್ಚಿಗೆ ಹಣ ಕೊಟ್ಟಿರಲಿಲ್ಲ. ತಾಯಿ ಹಣ ನೀಡದಿದ್ದಕ್ಕೆ ಕುತ್ತಿಗೆಯಲ್ಲಿದ್ದ ತಾಳಿ ಕೇಳಿದ್ದಾನೆ.
ಅಮಲಿನ ದಾಸನಾಗಿದ್ದ ರಾಹುಲ್, ಅಮ್ಮನ ಬಳಿ ಹಣಕ್ಕಾಗಿ ಪೀಡಿಸಿದ್ದಾನೆ. ಅದೇ ಕಾರಣಕ್ಕೆ ತಾಯಿ ಮಗನ ಮಧ್ಯೆ ಜಗಳ ನಡೆದಿದೆ. ಆ ವೇಳೆ ತಾಯಿಗೆ ಚಾಕುವಿನಿಂದ ಇರಿದು ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ. ಗಾಯಗೊಂಡ ವಿಜಯಲಕ್ಷ್ಮಿಯ ಕಿರುಚಾಟ ಕೇಳಿಸಿಕೊಂಡ ಸ್ಥಳೀಯರು ಆಕೆಯ ನಿವಾಸಕ್ಕೆ ದೌಡಾಯಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಆರೋಪಿ ರಾಹುಲ್ ನನ್ನು ಬಂಧಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜ್ಞಾನ ಭಾರತೀ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.