ಹಬ್ಬ ಹರಿದಿನಗಳಿಗೆ ಸಿಂಪಲ್ ಆಗಿ ಮಾಡಿ ಪನ್ನೀರ್ ಖೀರ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

ಸುಲಭವಾಗಿ ಮನೆಯಲ್ಲೇ ಪನ್ನೀರ್‌ ಖೀರ್‌ ಮಾಡುವ ಸರಳ ವಿಧಾನ, ಪನ್ನೀರ್‌ ಖೀರ್‌ ಮಾಡಲು ಬೇಕಾಗುವ ಸಾಮಗ್ರಿಗಳು

*ಪನ್ನೀರ್- ½ ಬಟ್ಟಲು

* ಹಾಲು -  2 ಬಟ್ಟಲು

*ಕಾರ್ನ್ ಫ್ಲೋರ್ -  2 ಚಮಚ

*ಸಕ್ಕರೆ -  2-3 ಚಮಚ

* ಏಲಕ್ಕಿ ಪುಡಿ -  ಸ್ವಲ್ಪ

*ಪಿಸ್ತಾ- 2 ಚಮಚ

*ಕೇಸರಿ - ಸ್ವಲ್ಪ

* ಬಾದಾಮಿ - 2 ಚಮಚ

ಪನ್ನೀರ್‌ ಖೀರ್‌ ಮಾಡುವ ವಿಧಾನ

ಒಂದು ಪಾತ್ರೆಗೆ ಒಂದು ಕಪ್ ಹಾಲನ್ನು ಹಾಕಿ ನಂತರ ಕೇಸರಿಯನ್ನು ಹಾಕಿ ನೆನೆಸಿಡಿ. ಸ್ವಲ್ಪ ತಣ್ಣನೆ ಹಾಲಿಗೆ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಗೆ ಸ್ವಲ್ಪ ಹಾಲನ್ನು ಹಾಕಿ ಕುದಿಸಿ. ಹಾಲು ಕುದಿಯುತ್ತಿರುವಾಗ ಕಾರ್ನ್ ಪ್ಲೋರ್ ಮಿಶ್ರಿತ ಹಾಲನ್ನು ಹಾಕಿ 10 ನಿಮಿಷ ಮಿಕ್ಸ್‌ ಮಾಡಿ. ಹಾಲು ಸ್ವಲ್ಪ ದಪ್ಪಗಾಗುತ್ತದೆ. ಇದಕ್ಕೆ ಕೇಸರಿಯುಕ್ತ ಹಾಲನ್ನು ಹಾಕಿ. ಬಳಿಕ ಪನ್ನೀರ್ ಹಾಗೂ ಸಕ್ಕರೆ ಹಾಕಿ ಮಿಕ್ಸ್ ಮಾಡಿ. 10 ನಿಮಿಷ ಕುದಿಸಿದ ನಂತರ ಏಲಕ್ಕಿ ಪುಡಿ, ಪಿಸ್ತಾ ಪುಡಿ, ಬಾದಾಮಿ ಪುಡಿಯನ್ನು ಹಾಕಿ ಕುದಿಸಿ. ತಣ್ಣಗಾದ ನಂತರ ಪ್ರಿಡ್ಜ್‌ನಲ್ಲಿ ಇಟ್ಟು 1 ಗಂಟೆಯ ನಂತರ ಸೇವಿಸಿ.

 

 

Author:

...
Editor

ManyaSoft Admin

Ads in Post
share
No Reviews