ಶಿರಾ:
ಶಿರಾದ ಬಸ್ ನಿಲ್ದಾಣದಲ್ಲಿ ಸಾಲು ಸಾಲು ರಜೆ ಮುಗಿಸಿ ನಗರಗಳಿಗೆ ಹಿಂತಿರುಗುತ್ತಿದ್ದ ಕಾರಣ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶಿರಾ ನಗರದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ಗಳು ಬರದೆ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಬಸ್ ನಿಲ್ದಾಣದಲ್ಲಿ ಶಿರಾದಿಂದ ಬೆಂಗಳೂರು ಮತ್ತು ತುಮಕೂರು ಕಡೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಬಸ್ ಸಿಗದೆ ಜನ ಪರದಾಡುತ್ತಿದ್ದರು. ಇನ್ನು ಒಂದೇ ಒಂದು ಬಸ್ ಬಂದರೆ ಸಾಕು ಸೀಟ್ ಹಿಡಿದುಕೊಳ್ಳಲು ಜನ ಪೈಪೋಟಿ ನಡೆಸುತ್ತಿದ್ದರು. ಯಾವುದೇ ಬಸ್ ಬಂದರೂ ಕೂಡ ಜನ ಸೀಟಿಗಾಗಿ ಫುಲ್ ಪೈಟ್ ನಡೆಸುತ್ತಿದ್ದರು.
ಇನ್ನು ಶಿರಾ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಕಡೆಗೆ ಚಲಿಸುವ ಬಸ್ ಯಾವ ಜಾಗದಲ್ಲಿ ನಿಲ್ಲುತ್ತೆ. ಪ್ಲಾಟ್ ಪಾರಂ ಏನು ಯಾವುದನ್ನು ಸಾರಿಗೆ ಇಲಾಖೆ ನಮೂದಿಸಿಲ್ಲ. ಈ ಹಿನ್ನಲೆ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಸಂಗತಿ. ಈ ಕಾರಣಕ್ಕೆ ಪ್ರತಿನಿತ್ಯ ಶಿರಾ ಜನರು ಬಸ್ ಗಾಗಿ ಕಾದು ಕಾದು ಬೇಸತ್ತಿದ್ದಾರೆ. ಇನ್ನಾದರೂ ಸಾರಿಗೆ ಇಲಾಖೆ ಶಿರಾ ಜನರ ಸಾರಿಗೆ ಸಮಸ್ಯೆಯನ್ನು ಬಗೆಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.