ಶಿರಾ:
ಶಿರಾ ತಾಲೂಕಿನ ಶಾಗದಡು ಗ್ರಾಮದಲ್ಲಿ ನಿರ್ಮಾಣ ಆಗ್ತಿರೋ ಅಂಗನವಾಡಿ ಕೇಂದ್ರದ ನಿರ್ಮಾಣದಲ್ಲಿ ಅಕ್ರಮದ ವಾಸನೆ ಬಡಿದಿದೆ, ಹೌದು ಅಂಗನವಾಡಿ ಕೇಂದ್ರದ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು ಸೂಕ್ತ ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಂಗನವಾಡಿ ಕೇಂದ್ರದ ಮೇಲ್ಛಾವಣಿಗೆ ಕಾಂಕ್ರಿಟ್ ಹಾಕಲಾಗಿದ್ದು ಗುತ್ತಿಗೆದಾರರು ಕಾಂಕ್ರಿಟ್‌ಗೆ ಒಂದು ದಿನವೂ ಕೂಡ ಕ್ಯೂರಿಂಗ್ ಮಾಡಿಲ್ಲ, ಕ್ಯೂರಿಂಗ್ ಮಾಡದಿದ್ದರೆ ಕಟ್ಟಡ ಗುಣಮಟ್ಟದಿಂದ ಕೂಡಿರುವುದಿಲ್ಲ ಅಂತಾ ಗೊತ್ತಿದ್ದರೂ ಕೂಡ ಕ್ಯೂರಿಂಗ್ ಮಾಡಿಲ್ಲ.
ಗುತ್ತಿಗೆದಾರರು ಕಳಪೆ ಗುಣಮಟ್ಟದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಗ್ರಾಮಸ್ಥರು ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.