Saptami Gowda : ಕಾಂತಾರ ಬೆಡಗಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ನಟಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ
ಕನ್ನಡ

SAPTAMI GOWDA : ಕಾಂತಾರ ಸಿನಿಮಾ ಬೆಡಗಿ ಸಪ್ತಮಿ ಗೌಡಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಾಂತಾರ ಸಿನಿಮಾದಿಂದ ದೊಡ್ಡ ಸಕ್ಸಸ್‌ ಕಂಡಿರುವ ನಟಿ ಸಪ್ತಮಿಗೌಡ, ಆ ಬಳಿಕ ಸಾಕಷ್ಟು ಹೊಸ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ, ಕಾಂತಾರ ಸಿನಿಮಾ ಬಳಿಕ ನಟಿಗೆ ಬೇರೆ ಬೇರೆ ಭಾಷೆಗಳಿಂದಲೂ ಆಫರ್‌ಗಳ ಸುರಿಮಳೆ ಆಗ್ತಿದೆ.

ಹೊಂಬಾಳೆ ಫಿಲ್ಮ್‌ ಬ್ಯಾನರ್‌ ಅಡಿಯಲ್ಲಿ ಯುವ ರಾಜ್‌ ಕುಮಾರ್‌ ನಟನೆಯ ಯುವ ಸಿನಿಮಾದಲ್ಲಿಯೂ ಸಪ್ತಮಿ ಗೌಡ ನಟಿಸಿದ್ರು. ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಪ್ತಮಿ ಗೌಟ ಇದೀಗ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚ್ತಾ ಇದಾರೆ. ಅಲ್ಲದೇ ಈ ಚೆಲುವೆಗೆ ಇದೀಗ ಡಿಮ್ಯಾಂಡ್‌ ಕೂಡ ಹೆಚ್ಚಿದ್ದು, ಇತ್ತೀಚೆಗೆ ಸಿಕ್ಕಾಪಟ್ಟೆ ಸ್ಲಿಮ್‌ ಕೂಡ ಆಗಿದ್ದಾರೆ.

ಸಪ್ತಮಿ ಗೌಡ ತಮ್ಮ ಸಿನಿಮಾ ಪ್ರಯಾಣವನ್ನು ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಪ್ರಾರಂಭಿಸಿದ್ದರು. ತಮ್ಮ ಮೊದಲ ಸಿನಿಮಾದಲ್ಲೇ ಉತ್ತಮ ಪಾತ್ರ ನಿರ್ವಹಿಸಿ ಗಮನ ಸೆಳೆದ ಅವರು, ಇದೀಗ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ನಟನ ಶಕ್ತಿ ಪ್ರದರ್ಶಿಸುತ್ತಿದ್ದಾರೆ.

ಇತ್ತೀಚೆಗಿನ ಫೋಟೋಶೂಟ್‌ಗಳು ಹಾಗೂ ಪಬ್ಲಿಕ್ ಇವೆಂಟ್‌ಗಳಲ್ಲಿ ಸಪ್ತಮಿ ಗೌಡ ಸ್ಲಿಮ್‌ ಆಗಿ ಸ್ಟೈಲಿಶ್ ಲುಕ್‌ನಲ್ಲಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಅವರ ಫಿಟ್‌ನೆಸ್ ಟ್ರಾನ್ಸ್‌ಫಾರ್ಮೇಷನ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಂದು ಅವರ ಹುಟ್ಟುಹಬ್ಬದ ವಿಶೇಷ ದಿನ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಚಿತ್ರರಂಗದ ಗೆಳೆಯರು, ಸಹ ಕಲಾವಿದರು ವಿಷಸ್‌ ತಿಳಿಸುತ್ತಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews