Sandalwood : ಸ್ಯಾಂಡಲ್ ವುಡ್ ನಿಂದ ಗಾಯಕ ಸೋನು ನಿಗಮ್ ಬ್ಯಾನ್..?

ಸೋನು ನಿಗಮ್
ಸೋನು ನಿಗಮ್
ರಾಜ್ಯ

Sandalwood : 

ಕನ್ನಡದ ಹಾಡು ಹೇಳುವಂತೆ ಕೇಳಿದ್ದಕ್ಕೆ ಪಹಲ್ಗಾಮ್‌ ಹೋಲಿಸಿದ್ದ ಗಾಯಕ ಸೋನು ನಿಗಮ್‌ ವಿರುದ್ದ ಸ್ಯಾಂಡಲ್‌ ವುಡ್‌ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಕನ್ನಡ ಎಂದವರನ್ನು ಪಹಲ್ಗಾಮ್‌ ಗೆ ಹೋಲಿಸಿದ್ದಕ್ಕೆ ಸೋನು ನಿಗಮ ವಿರುದ್ದ ಕ್ಷಮೆ ಕೇಳಬೇಕು ಎಂದು ಭಾರೀ ಅಕ್ರೋಶ ವ್ಯಕ್ತವಾಗಿತ್ತು. ಆದರೆ ಸೋನು ನಿಗಮ್‌ ಕ್ಷಮೆ ಕೇಳದೆ ಮತ್ತೊಂದು ಹೇಳಿಕೆ ನೀಡಿದ್ದರು, ಇದರಿಂದ ಸೋನು ನಿಗಮ್‌ ರನ್ನು ಕನ್ನಡಚಿತ್ರರಂಗದಿಂದ ತಾತ್ಕಾಲಿಕ ನಿರ್ಬಂಧ ಏರಲು ಕನ್ನಡ ಫಿಲ್ಮ್‌ ಚೇಂಬರ್‌ ನಿರ್ಧಾರ ಮಾಡಿದೆ.

ಗಾಯಕ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ ವಿಚಾರದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಂಭೀರವಾಗಿ ಕ್ರಮ ಜರುಗಿಸುವ ಬಗ್ಗೆ ಇಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಚರ್ಚಿಸಿದ ನಂತರ ಸೋನು ನಿಗಮ್‌ ಕನ್ನಡಿಗರ ಬಳಿ ಕ್ಷಮಾಪಣೆ ಕೇಳುವವರೆಗೂ ಕನ್ನಡ ಚಲನಚಿತ್ರರಂಗದಿಂದ ದೂರ ಇಡೋದಕ್ಕೆ ಫಿಲ್ಮ್‌ ಚೇಂಬರ್‌ ನಿರ್ಧಾರ ಮಾಡಿದೆ, ಫಿಲ್ಮ್‌ ಚೇಂಬರ್‌ ನ ಈ ನಿರ್ಧಾರಕ್ಕೆ ಕನ್ನಡ ಚಲನಚಿತ್ರರಂಗದ ಸಂಗೀತ ನಿರ್ದೇಶಕರ ಸಂಘ, ನಿರ್ದೇಶಕರ ಸಂಘ ಹಾಗೂ ನಿರ್ಮಾಪಕರ ಸಂಘದ ಪ್ರತಿನಿಧಿಗಳು ಸೇರಿ ಇಂದು ವಿಶೇಷ ಸಭೆಯನ್ನು ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. 

Author:

...
Sushmitha N

Copy Editor

prajashakthi tv

share
No Reviews