ಉಲ್ಟಾ ಹೊಡೆದ ಅಮೆರಿಕ | ರಷ್ಯಾ ಪರ ಅಮೆರಿಕ ಬ್ಯಾಟಿಂಗ್

ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್
ಅಂತರರಾಷ್ಟ್ರೀಯ

ಉಕ್ರೇನ್ ಹಾಗೂ ರಷ್ಯಾದ ಯುದ್ಧ ನಿಲ್ಲಿಸಲು ಹಾಗೂ ಶಾಂತಿಯುತವಾಗಿ ಪರಿಹರಿಸಲು ಕರೆ ನೀಡಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕರಡು ನಿರ್ಣಯದಲ್ಲಿ ಸೋಮವಾರ ಅಮೆರಿಕವು ರಷ್ಯಾದ ಪರವಾಗಿ ನಿಂತಿದೆ. ಹಿಂದೆ ಉಕ್ರೇನ್ಪರವಾಗಿದ್ದ ಅಮೆರಿಕ ಇದೀಗ ಉಲ್ಟಾ ಹೊಡೆಯುತ್ತಿದೆ.

ರಷ್ಯಾ-ಉಕ್ರೇನ್ ಯುದ್ಧದ ಮೂರನೇ ವಾರ್ಷಿಕೋತ್ಸವದಂದು ನಿರ್ಣಯ ಹೊರಬಿದ್ದಿದ್ದು, ರಷ್ಯಾದ ಮಿತ್ರರಾಷ್ಟ್ರಗಳಾದ ಬೆಲಾರಸ್, ಉತ್ತರ ಕೊರಿಯಾ ಮತ್ತು ಸುಡಾನ್ ನಿರ್ಣಯದಲ್ಲಿ ರಷ್ಯಾವನ್ನು ಬೆಂಬಲಿಸಿದವು.

ಸಂಘರ್ಷ ನಿವಾರಣೆಗಾಗಿ ಉಭಯ ದೇಶಗಳು ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂಬ ನಿಲುವಿಗೆ ಭಾರತ ಬದ್ಧವಾಗಿದ್ದು, ಅಧಿಕೃತವಾಗಿ ಮತದಾನದಿಂದ ದೂರ ಉಳಿದಿದೆ. ಯೂರೋಪಿಯನ್ ಒಕ್ಕೂಟ ಮತ್ತು ಉಕ್ರೇನ್ ದೇಶಗಳನ್ನು ಹೊರಗಿಟ್ಟು ನೇರವಾಗಿ ರಷ್ಯಾ ಜತೆ ಮಾತುಕತೆಯಲ್ಲಿ ಅಮೆರಿಕ ತೊಡಗಿದೆ.

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ, ಅಮೆರಿಕ ಮತ್ತು ಉಕ್ರೇನ್ ನಡುವಿನ ಸಂಬಂಧಗಳು ಹದಗೆಟ್ಟಿವೆ. ಉಕ್ರೇನ್ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಸರ್ವಾಧಿಕಾರಿ ಎಂದುಕರೆದಿರುವ ಡೊನಾಲ್ಡ್ಟ್ರಂಪ್‌, ಉಕ್ರೇನ್ನಾಶಕ್ಕೆ ಝೆಲೆನ್ಸ್ಕಿ ಅವರ ಹಠಮಾರಿ ಧೋರಣೆಗಳು ಕಾರಣವಾಗುತ್ತಿವೆ ಎಂದು ಡೊನಾಲ್ಡ್ಟ್ರಂಪ್ ಹೇಳಿದ್ದರು.


 

Author:

share
No Reviews