IPL 2025 : ಫೈನಲ್‌ ಪಂದ್ಯಕ್ಕೆ ಲಗ್ಗೆಯಿಟ್ಟ ಪಂಜಾಬ್ ಕಿಂಗ್ಸ್

IPL 2025 : ಕ್ವಾಲಿಫೈಯರ್‌ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (MI) ವಿರುದ್ದ ರೋಚಕ 5 ವಿಕೆಟ್‌ ಗಳಿಂದ ಗೆಲುವು ಸಾಧಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ (PBKS) ತಂಡ ಐಪಿಎಲ್‌ 2025ರ ಫೈನಲ್‌ಗೆ ಲಗ್ಗೆಯಿಟ್ಟಿದೆ. 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡವನ್ನು ಬಗ್ಗು ಬಡಿದ ಪಂಜಾಬ್‌ 2ನೇ ಬಾರಿ ಫೈನಲ್‌ಗೆ ತಲುಪಿದ್ದು, ನಾಳೆ ಆರ್‌ಸಿಬಿ (RCB)ಯನ್ನು ಎದುರಿಸಲಿದೆ.

ಮಳೆಯಿಂದ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಮುಂಬೈ 6 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಂಜಾಬ್‌ ನಾಯಕ ಶ್ರೇಯಸ್‌ ಅಯ್ಯರ್‌  ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನೂ 6 ಎಸೆತ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿ ಜಯ ಸಾಧಿಸಿತು. ಪಂಜಾಬ್ ಐಪಿಎಲ್‌ನಲ್ಲಿ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದೆ. 11 ವರ್ಷಗಳ ಹಿಂದೆ 2014 ರಲ್ಲಿ ಕೋಲ್ಕತ್ತಾ ವಿರುದ್ಧ ಫೈನಲ್‌ನಲ್ಲಿ ಸೋತು ಪಂಜಾಬ್‌ ರನ್ನರ್‌ ಅಪ್‌ ಆಗಿತ್ತು. ಈ ಬಾರಿ ಮತ್ತೊಮ್ಮೆ ಫೈನಲ್‌ ಪಂದ್ಯ ಆಡಲು ಸಜ್ಜಾಗಿದೆ.

Author:

...
Sushmitha N

Copy Editor

prajashakthi tv

share
No Reviews