HAVERI: ಮೈಕ್ರೋ ಫೈನಾನ್ಸ್‌ ಕಾಟಕ್ಕೆ ಊರನ್ನೇ ಬಿಡ್ತಿರೋ ಜನರು

ಹಾವೇರಿ
ಹಾವೇರಿ
ಹಾವೇರಿ

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಸಾಲ ಕೊಟ್ಟು ಜನರನ್ನು ಫೈನಾನ್ಸ್‌ ಕಂಪನಿಗಳು ಶೂಲಕ್ಕೆ ಏರಿಸುತ್ತಿವೆ.. ಇದ್ರಿಂದ ಊರನ್ನೇ ಬಿಟ್ಟು ಹೋಗೋ ಪ್ರಸಂಗಗಳು ಎದುರಾಗ್ತಿವೆ.

 ಮೈಕ್ರೋ ಫೈನಾನ್ಸ್‌ ಅವರೇ ಸಾಲ ಕೊಡ್ತೀವಿ ಅಂತಾ ಬಂದು ಬಲವಂತಾಗಿ ಸಾಲ ಕೊಡ್ತಾರೆ… ಮತ್ತೆ ಸಾಲವನ್ನು ಹಿಂದುರಿಗಿಸಿ ಅಂತಾ ರೌಡಿಗಳಂತೆ ವರ್ತಿಸೋದು ಅವರೇ.. ಇವರ ಕಾಟದಿಂದ ಬಡಪಾಯಿ ಜೀವಿಗಳು ಹುಟ್ಟಿ ಬೆಳೆದ ಊರನ್ನೇ ಬಿಟ್ಟು ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಚಾಮರಾಜ ನಗರ, ಮೈಸೂದು ಜಿಲ್ಲೆಯ ನೂರಾರು ಕುಟುಂಬಗಳು ಗ್ರಾಮವನ್ನೇ ತೊರೆದಿದ್ದು, ಈ ಬೆನ್ನಲ್ಲೇ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡ್ಡದಬೇವಿನಹಳ್ಳಿ ಸೇರಿ ಹಲವು ಗ್ರಾಮಗಳ ಜನರು ತಮ್ಮ ಊರನ್ನು ತೊರೆಯುತ್ತಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲವು ಗ್ರಾಮಗಳ ಜನರು ತಮ್ಮ ಜೀವನ ನಿರ್ವಹಣೆಗೆ ಮೈಕ್ರೋಫೈನಾನ್ಸ್‌ನಲ್ಲಿ ಸಾಲ ಪಡೆದಿದ್ರು. ಸಾಲ ಪಡೆದವರು ಸಾಲ ತೀರಿಸೋದು ಸ್ವಲ್ಪ ತಡವಾಗಿದೆ ಇಷ್ಟಕ್ಕೆ ಸಾಲ ಕೊಟ್ಟ ಕಂಪನಿಗಳು ಜನರ ಹಿಂದೆ ಬಿದ್ದು ಹಿಂಸೆ ಕೊಡಲು ಶುರು ಮಾಡಿದ್ದಾರೆ. ದಿನ ನಿತ್ಯ ಮನೆ ಬಾಗಿಲಿಗೆ ಬಂದು ಟಾರ್ಚರ್‌ ಕೊಡ್ತಾ ಇದ್ದು, ಹೆಚ್ಚಿನ ಬಡ್ಡಿ ಕಟ್ಟಿಸಿಕೊಳ್ಳುವುದಲ್ಲೇ, ಜೈಲು, ಕೋರ್ಟ್‌ ಅಂತಾ ಹೆದರಿಸ್ತಾ ಇದ್ದಾರಂತೆ..  ಮನೆಯಲ್ಲಿದ್ದರೆ ಹಣ ಕೊಡಿ ಅಂತಾ ಪೀಡಿಸ್ತಾರೆ.., ಹೀಗಾಗಿ ಊರನ್ನೇ ಬಿಟ್ಟು ಹೋಗ್ತಾ ಇದ್ದೀವಿ ಅಂತಾ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.,

 ಮೈಕ್ರೋ ಫೈನಾನ್ಸ್‌ಗಳ ಕಾಟದಿಂದಾಗಿ ಮಕ್ಕಳ ವಿದ್ಯಾಭ್ಯಾಸವು ಕೂಡ ಹಾಳಾಗುತ್ತಿದೆ. ಹಲವರು ನಿರ್ಜನ ಪ್ರದೇಶಕ್ಕೆ ತೆರಳಿ ಸೆಲ್ಫಿ ವಿಡಿಯೋ ಮಾಡಿ ನಮಗೆ ನೆರವು ನೀಡಿ ಎಂದು ಅಂಗಲಾಚುತ್ತಿದ್ದಾರೆ. ಊರಿಗೆ ಹೋದರೆ ಫೈನಾನ್ಸ್ ಸಿಬ್ಬಂದಿ ಕಾಟ ಹೀಗಾಗಿ ಮನೆಗಳಿಗೆ ಬೀಗ ಹಾಕಿಕೊಂಡು ಊರನ್ನೇ ಬಿಟ್ಟು ಹೋಗುವಂತಾಗಿದ್ದು, ನಮ್ಮನ್ನು ಇದ್ರಿಂದ ಪಾರು ಮಾಡಿ ಎಂದು ಮನವಿ ಮಾಡಿಕೊಳ್ತಿದ್ದಾರೆ.

 

 

Author:

share
No Reviews