ಪಾವಗಡ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಸಾಮಾನ್ಯ ಸಭೆ ಹಾಗೂ ಪ್ರಗತಿಪರ ಸಭೆ ಆಯೋಜನೆ ಮಾಡಲಾಯ್ತು. ಸಭೆಯಲ್ಲಿ ತಾಲೂಕು ಪಂಚಾಯತಿಯ ಜಾನಕಿ ರಾಮ್, ಜಿಲ್ಲಾ ಪಂಚಾಯತಿ, ಇಂಜಿನಿಯರ್ ಸುರೇಶ್, ಬಸಲಿಂಗಪ್ಪ ಹಾಗೂ ಇಲಾಖೆಯ ಅಧಿಕಾರ ಅಧಿಕಾರಿಗಳು ಭಾಗಿಯಾಗಿದ್ರು. ಸಭೆಯಲ್ಲಿ ಕುಂದು ಕೊರತೆಗಳ ಬಗ್ಗೆ ಚರ್ಚಸುವ ಬದಲು ಅಧಿಕಾರಿಗಳು ಮೊಬೈಲ್‌ನಲ್ಲಿ ಮಗ್ನವಾಗಿದ್ರು. ಹೌದು ಸಭೆ ನಡೆಯುವ ವೇಳೆ ಇಲಾಖೆಯವರು ಮಾಹಿತಿ ಪಡೆಯುತ್ತಿದ್ರು… ಈ ವೇಳೆ ಅಧಿಕಾರಿಗಳು ಮೊಬೈಲ್‌ನಲ್ಲಿ ಬ್ಯೂಸಿಯಾಗಿರೋದು ಕಂಡು ಬಂದಿತು.
ಇನ್ನು ಸಭೆಯಲ್ಲಿ ಇಲಾಖೆವಾರು ಸಮಸ್ಯೆಗಳು ಬಂದಾಗ ಮೊದಲು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಂಬುದಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲ ಸಿದ್ಧಪ್ಪ ಪೂಜಾರಿ ತಿಳಿಸಿದರು. ಸಭೆಯಲ್ಲಿ ಬೇಸಿಗೆ ಆರಂಭವಾಗಿದ್ದು, ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಜಿಲ್ಲಾ ಪಂಚಾಯ್ತಿ ಇಂಜಿನಿಯರ್‌ಗೆ ಸೂಚನೆ ನೀಡಲಾಯ್ತು. ಅಲ್ದೇ ಪಾವಗಡ ತಾಲೂಕಿನಲ್ಲಿ 18 ಆರ್‌ಒ ಪ್ಲಾಂಟ್‌ಗಳು ಕೆಟ್ಟು ನಿಂತಿವೆ,, ಆದ್ರ ಬಗ್ಗೆ ಮಾಹಿತಿ ಪಡೆದು ದುರಸ್ಥಿಗೊಳಿಸುವಂತೆ ಸೂಚನೆ ಕೊಡಲಾಯ್ತು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಸಮಸ್ಯೆಗಳು ಉಂಟಾಗುತ್ತಿದ್ದು,ಕೂಡಲೇ ವೈದ್ಯರನ್ನು ನೇಮಿಸಕೊಳ್ಳಲಾಗುವುದು ಎಂದ್ರು. ತಾಲೂಕಿನಲ್ಲಿರೋ ನಕಲಿ ವೈದ್ಯರ ಬಗ್ಗೆ ತಾಲೂಕು ಆಡಳಿತ ಕ್ರಮ ಕೈಗೊಂಡು ಅದರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.