ಪಾವಗಡ-ಪಾವಗಡದಲ್ಲಿ ಬಿರು ಬೇಸಿಗೆ ಶುರುವಾಗಿದ್ದು, ನೀರಿಗಾಗಿ ಆಹಾಕಾರ

ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಬರೆದ ನಾಡು ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶವಾಗಿದೆ. ತಾಲೂಕಿನ ನಾಗಲಮಡಿಕೆ ಹೋಬಳಿಯ ರ್ಯಾಪ್ಟೆ  ಗ್ರಾಪಂ ವ್ಯಾಪ್ತಿಯ ನಾಗೇನಹಳ್ಳಿಯ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ನೀರಿಗೆ ಹಾಹಾಕಾರ ಉಂಟಾಗಿದೆ, ಈ ಗ್ರಾಮದಲ್ಲಿ ಎರಡು ಬೋರ್ ಗಳಿಂದ  ಗ್ರಾಮದ  ಜನರಿಗೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ಐದು ದಿನಗಳ ಹಿಂದೆ ಕುಡಿಯುವ ನೀರಿನ ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋಗಿದ್ದು ಮೋಟಾರನ್ನು ರಿಪೇರಿ ಮಾಡಲು ತೆಗೆದುಕೊಂಡು ಹೋಗಿದ್ದ ಮೆಕಾನಿಕ್ ರಿಪೇರಿ ಮಾಡದೆ ಮೋಟಾರನ್ನು ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾನೆ.

ಇನ್ನು ಈ ಬಗ್ಗೆ ಗ್ರಾಮಸ್ಥರು ಕೇಳಿದರೆ ನನಗೆ ಗ್ರಾಮ ಪಂಚಾಯಿತಿಯಿಂದ ಈ ಹಿಂದೆ ಮೋಟಾರ್ ಗಳನ್ನು  ರಿಪೇರಿ ಮಾಡಿದ ಸಾಕಷ್ಟು ಹಣ ಬರಬೇಕು. ಆ ಹಣ ಬರುವವರೆಗೂ ನಾನು ಇದನ್ನು ರಿಪೇರಿ ಮಾಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇಷ್ಟಲ್ಲಾ ಸಮಸ್ಯೆಯಿದ್ರೂ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಪಿಡಿಒ ಗ್ರಾಮಸ್ಥರ ನೆರವಿಗೆ ಬರುತ್ತಿಲ್ಲ .

ನೀರಿಗಾಗಿ ಆಹಾಕಾರ ಉಂಟಾಗಿದ್ದು, ನಾಗೇನಹಳ್ಳಿಯ ನಾಲ್ಕು ಮನೆಯವರು ಪಕ್ಕದ ಗ್ರಾಮಗಳಿಗೆ ಟ್ರ್ಯಾಕ್ಟರ್ ನಲ್ಲಿ ಹೋಗಿ  ಡ್ರಮ್ ಬಿಂದಿಗೆಯನ್ನು ಹಿಡಿದು ನೀರು ತರುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನುಳಿದ ಮನೆಗಳ ಪರಿಸ್ಥಿತಿ ಏನು ಎಂಬುದು ಸದ್ಯದ  ಪ್ರಶ್ನೆಯಾಗಿದೆ. ಈ ಸಮಸ್ಯೆಯ ಬಗ್ಗೆ ಸಂಬಂಧ ಪಟ್ಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಜನರ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬುದಾಗಿ  ಕಾದು ನೋಡಬೇಕಾಗಿದೆ.

Author:

share
No Reviews