ಪಾವಗಡ:
ಪಾವಗಡದ ಶ್ರೀ ಶನಿಮಹಾತ್ಮ ದೇವಸ್ಥಾನದ ಆಡಳಿತ ಮಂಡಳಿಯಾದ SSK ಕಾರ್ಯ ನಿರ್ವಾಹಕ ಸಂಘದ ಅಡಿಯಲ್ಲಿ 2012-13ರಲ್ಲಿ ಶಾಂತಿ SSK ಪಿಯು ಕಾಲೇಜನ್ನು ಪ್ರಾರಂಭ ಮಾಡಿದೆ. ಕಾಲೇಜಿನಲ್ಲಿ ತಾಲೂಕಿನ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಹಾಗೂ ಕಾಲೇಜಿನ ಶುಲ್ಕು ಭರಿಸಲು ಸಾಧ್ಯವಿಲ್ಲದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಪದವಿ ಪೂರ್ವ ಕಾಲೇಜನ್ನು ಆರಂಭಿಸಲಾಗಿದೆ. ಅತ್ಯಂತ ಕಡಿಮೆ ದಾಖಲಾತಿ ಶುಲ್ಕವನ್ನು ಪಡೆಯುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟ ಶಿಕ್ಷಣವನ್ನು ಕಾಲೇಜು ಆಡಳಿತ ಮಂಡಳಿ ನೀಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಪಾವಗಡ ತಾಲೂಕಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಇನ್ನು ಶಾಂತಿ SSK ಪಿಯು ಕಾಲೇಜಿನಲ್ಲಿ ಉತ್ತಮ ನುರಿತ ಅನುಭವಿ ಉಪನ್ಯಾಸಕರುಗಳನ್ನು ನೇಮಿಸಿಕೊಂಡಿದ್ದು, ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದು ಪಾವಗಡ ತಾಲ್ಲೂಕಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಉತ್ತಮ ಪ್ರಯೋಗಾಲಯ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿಪಿಟಿ ಪರೀಕ್ಷೆ ಬರೆಯಲು ಮಾರ್ಗದರ್ಶನ ನೀಡಲಾಗುತ್ತಿದೆ. ಇದಲ್ಲದೇ ಈ ವರ್ಷ ಕಲಾ ವಿಭಾಗವನ್ನು ಪ್ರಾರಂಭಿಸಲು ಕಾಲೇಜಿಗೆ ಅನುಮತಿ ದೊರೆತಿದೆ.
ಇಷ್ಟಲ್ಲದೇ ವಾರ ಪೂರ್ತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ವೇಳೆ ಶ್ರೀ ಶನಿಮಹಾತ್ಮ ದೇವರ ಅನ್ನ ಪ್ರಸಾದವನ್ನು ನೀಡಲಾಗುತ್ತಿದ್ದು, ಹಸಿವಿನಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗ್ತಿದೆ. 2025-26 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ದಾಖಲಾತಿಗೆ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಹೆಚ್ಚಿನ ಮಾಹಿತಿಗೆ ಶ್ರೀ ಮನೋಜ್ ಕುಮಾರ್ ಎಂ ಜಿ, ಪ್ರಾಂಶುಪಾಲರನ್ನು ಸಂಪರ್ಕಿಸಬಹುದಾಗಿದೆ. ಪ್ರಾಶುಂಪಾಲರ ಮೊಬೈಲ್ ಸಂಖ್ಯೆ 9741246146 ಆಗಿದ್ದು ಬಡ ವಿದ್ಯಾರ್ಥಿಗಳು ಅನುಕೂಲ ಪಡೆದುಕೊಳ್ಳಬಹುದಾಗಿದೆ.