CHAMPIONS TROPHY 2025 : ಪಾಕಿಸ್ತಾನ ಆಲೌಟ್‌… ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

ಇಂಡಿಯಾ  vs ಪಾಕಿಸ್ಥಾನ
ಇಂಡಿಯಾ vs ಪಾಕಿಸ್ಥಾನ
ಕ್ರಿಕೆಟ್‌

ಭಾರತ ಮತ್ತು ಪಾಕಿಸ್ತಾನ ತಂಡಗಳು 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಲಾ ಒಂದು ಪಂದ್ಯವನ್ನು ಆಡಿವೆ. ಇದರಲ್ಲಿ ಟೀಮ್ ಇಂಡಿಯಾ ಗೆದ್ದಿದ್ದರೆ,ಪಾಕಿಸ್ತಾನ ಸೋತಿದೆ.   ಈಗ ಎರಡೂ ತಂಡಗಳು ದುಬೈನಲ್ಲಿ ನಡೆಯುತ್ತಿರುವ  ಹೈವೋಲ್ಟೇಜ್ ಕದನದಲ್ಲಿ ಪರಸ್ಪರ ಮುಖಾಮುಖಿಯಾಗಿವೆ.

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಐದನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ನಡೆಯುತ್ತಿದೆ.ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಟೀಮ್ ಇಂಡಿಯಾದ ಬೌಲಿಂಗ್ ದಾಳಿಗೆ ಪತರುಗುಟ್ಟಿದೆ. ಪರಿಣಾಮ ಪಾಕಿಸ್ತಾನ 49.4 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದೆ.

ಪಾಕಿಸ್ತಾನ ವಿರುದ್ಧ ಗೆಲ್ಲಲು ಭಾರತ 242ರನ್‌ಗಳ ಗುರಿಯನ್ನು ತಲುಪಬೇಕಾಗಿದೆ.ಈ ಪಂದ್ಯದಲ್ಲಿ ಭಾರತದ ಪರ ಕುಲದೀಪ್  ಯಾದವ್ 3 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದು ಮಿಂಚಿದ್ದಾರೆ.

Author:

share
No Reviews