MYSORE - ವಿದ್ಯುತ್ ತಂತಿ ತಗುಲಿ ಕಬ್ಬಿನ ಸೋಗು ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಭಸ್ಮ

ವಿದ್ಯುತ್‌ ತಂತಿ ತಗುಲಿ ಕ್ಯಾಂಟರ್‌ ಭಸ್ಮವಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆಯ ಬೆಟ್ಟದ ಬೀಡು ಗ್ರಾಮದಲ್ಲಿ ನಡೆದಿದೆ.

ಕಬ್ಬಿನ ಸೋಗು ತುಂಬಿಕೊಂಡು ಬರುತ್ತಿದ್ದ  ಗ್ರಾಮದ ಬಳಿ ಕ್ಯಾಂಟರ್‌ಗೆ ಹೈ ಟೆಕ್ಷನ್‌ ವಿದ್ಯುತ್ ತಂತಿ ತಗುಲಿದ ಪರಿಣಾಮ ಕ್ಯಾಂಟರ್ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ರಸ್ತೆ ಮಧ್ಯದಲ್ಲಿಯೇ ಕ್ಯಾಂಟರ್‌ ಧಗಧಗನೆ ಹೊತ್ತಿ ಉರಿದಿದೆ.

ಬೆಂಕಿ ಹೊತ್ತಿಕೊಂಡಿದ್ದ ಕ್ಯಾಂಟರ್‌ ಚಾಲಕ ತಕ್ಷಣ ವಾಹನದಿಂದ ಇಳಿದು ಅದೃಷ್ಟವಶಾತ್ ಕ್ಯಾಂಟರ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಕ್ಯಾಂಟರ್‌ ಸಂಪೂರ್ಣ ಸುಟ್ಟು ಕರಕಲಾಗಿದೆ.

 

Author:

share
No Reviews