ಜೀವಕ್ಕೆ ಸಂಚಕಾರ ಇದ್ರು ಕೂಡ ಟೆಂಡರ್ ತೆಗೆದುಕೊಂಡಿರುವವರು ಯಾವುದೇ ಸುರಕ್ಷತೆ ತೆಗೆದುಕೊಳ್ಳದೇ ಕಾರ್ಮಿಕರಿಂದ ರಸ್ತೆಗೆ ಹಾಕುವ ಟಾರ್ನನ್ನು ಉತ್ಪತ್ತಿ ಮಾಡ್ತಿದ್ದಾರೆ.
ಹೌದು, ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಬೈಪಾಸ್ ಮುಖ್ಯರಸ್ತೆಯಲ್ಲಿ ಕಾರ್ಮಿಕರು ಟಾರ್ ರೆಡಿ ಮಾಡ್ತಾ ಇದ್ದು, ಇಲ್ಲಿನ ಕಾರ್ಮಿಕರು ಯಾವುದೇ ಭದ್ರತೆ ಇಲ್ಲದೇ ಕೆಲಸ ಮಾಡ್ತಿದ್ದಾರೆ. ಹಾವೇರಿ ಮೂಲದ ಸುಮಾರು 15ಕ್ಕೂ ಮಂದಿ ಕೂಲಿ ಕಾರ್ಮಿಕರು ಟಾರ್ ಉತ್ಪತ್ತಿ ಮಾಡುವ ಕೆಲಸಕ್ಕೆ ಗುಳೆ ಬಂದಿದ್ದಾರೆ. ಆದ್ರೆ ಈ ಕಾರ್ಮಿಕರಿಗೆ ಗುತ್ತಿಗೆದಾರ ಯಾವುದೇ ಭದ್ರತೆಯನ್ನು ಒದಗಿಸಿಲ್ಲ..
ಕೊರಟಗೆರೆ ತಾಲೂಕಿನಲ್ಲಿ ಗುಂಡಿಬಿದ್ದ ರಸ್ತೆಗೆ ಟಾರ್ ಹಾಕಲು ಶಿವಣ್ಣ ಎಂಬ ಗುತ್ತಿಗೆದಾರ, PWD ಇಲಾಖೆಯಿಂದ ಗುತ್ತಿಗೆ ಪಡೆದುಕೊಂಡು ಕೆಲಸ ,ಮಾಡಿಸ್ತಾ ಇದ್ದಾರೆ. ಗುಂಡಿ ಬಿದ್ದ ರಸ್ತೆಗೆ ಟಾರ್ ಹಾಕಲು ಹಾವೇರಿಯಿಂದ 15 ಮಂದಿ ಹೆಚ್ಚು ಬಡ ಕಾರ್ಮಿಕರು ಬಂದಿದ್ದಾರೆ. ಆದ್ರೆ ಈ ಕಾರ್ಮಿಕರಿಗೆ ಗುತ್ತಿಗೆದಾರ ಆಗಿರಬಹುದು ಅಥವಾ PWD ಇಲಾಖೆ ಅಧಿಕಾರಿಗಳಾಗಲಿ ಈ ಕಾರ್ಮಿಕರ ಸುರಕ್ಷತೆಯನ್ನು ಗಣನೆಗೆ ತೆಗೆದುಕೊಂಡಿಲ್ಲ.. ಟಾರ್ ಉತ್ಪತ್ತಿ ಮಾಡುವಾಗ ಬೇಕಾದ ಕನಿಷ್ಠ ಗ್ಲೌಸ್ಗಳು ಕೂಡ ನೀಡಿಲ್ಲ.. ಗ್ಲಾಸ್ಗಳಿಲ್ಲದೇ ಕುದಿಯುತ್ತಿರುವ ಟಾರ್ನನ್ನು ಬಕೆಟ್ಗಳಲ್ಲಿ ತುಂಬಿಕೊಂಡು ಸಾಗಿಸ್ತಾ ಇದ್ದಾರೆ. ಇದ್ರಿಂದ ಆಕಸ್ಮಿಕವಾಗಿ ಬಿಸಿಯಾದ ಟಾರ್ ಏನಾದ್ರು ಮೈ ಮೇಲೆ ಬಿದ್ರೆ ಗಂಭೀರ ಗಾಯಗಳಾಗುವ ಸಾಧ್ಯತೆ ಇದೆ.
ಇನ್ನು, ದೂರದ ಊರಿಂದ ಬಂದಿರುವ ಕಾರ್ಮಿಕರಿಗೆ ಉಳಿದುಕೊಳ್ಳಲು ಕೂಡ ವ್ಯವಸ್ಥೆ ಇಲ್ಲ.. ರೋಡ್ ಪಕ್ಕದಲ್ಲೇ ಟಾರ್ಪಲ್ನಿಂದ ಗುಡಿಸಲು ಹಾಕಿಕೊಂಡು ವಾಸ ಮಾಡ್ತಾ ಇದ್ದು, ಬಿಸಿಲು, ಚಳಿಗೆ ಕಾರ್ಮಿಕರು ನರಳುತ್ತಿದ್ದಾರೆ. ಇಷ್ಟೆಲ್ಲ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದರೂ ಗುತ್ತಿಗೆದಾರ ಮಾತ್ರ ಕೈಕಟ್ಟಿ ಕೂತಿದ್ದಾರೆ. ಇನ್ನಾದ್ರು PWD ಅಧಿಕಾರಿಗಳು, ಗುತ್ತಿಗೆದಾರರು ಕೂಡಲೇ ಎಚ್ಚೆತ್ತುಕೊಂಡು ಕಾರ್ಮಿಕರ ಸುರಕ್ಷತೆ ಬೇಕಾದ ಸೌಲಭ್ಯವನ್ನು ಒದಗಿಸಿ, ಕಾರ್ಮಿಕರ ಜೀವನವನ್ನು ಉಳಿಸಬೇಕಿದೆ.