ಪಾವಗಡ:
ಪಾವಗಡ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶಾಸಕ ಹೆಚ್.ವಿ ವೆಂಕಟೇಶ ನೇತೃತ್ವದಲ್ಲಿ ಟಾಸ್ಕ್ ಸ್ಪೋರ್ಟ್ ಸಭೆ ನಡೆಸಲಾಯಿತು. ಸಭೆಯಲ್ಲಿ ತಹಸೀಲ್ದಾರ್ ವರದರಾಜು, EO ಜಾನಕಿರಾಮ್, ಪಶುಪಾಲನ ಇಲಾಖೆಯ ಹೊರಕೆರಪ್ಪ, ಕೃಷಿ ಇಲಾಖೆಯ ಅಜಯ್, ತೋಟಗಾರಿಕೆ ಇಲಾಖೆಯ ವಿಶ್ವನಾಥ್ ಗೌಡ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುರಳೀಧರನ್ ಸೇರಿದಂತೆ ಹಲವರು ಹಾಜರಿದ್ದರು.
ಸಭೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೆ ಸಮರ್ಪಕವಾಗಿ ನೀರಿನ ಸೌಕರ್ಯ ಕಲ್ಪಿಸಬೇಕು, ಸಣ್ಣಪುಟ್ಟ ತೊಂದರೆಗಳು ಉಂಟಾದಾಗ ಶೀಘ್ರವಾಗಿ ಪರಿಹರಿಸಬೇಕು, ಬೇಸಿಗೆಯ ತೀವ್ರತೆ ಹೆಚ್ಚಾಗಿರುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗುವ ಲಕ್ಷಣಗಳಿದ್ದು, ಜಲಜೀವನ್ ಮಿಷನ್ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರಿಗೆ ನೀರು ಒದಗಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಶಾಸಕ ವೆಂಕಟೇಶ್ ಸೂಚಿಸಿದರು.
ಹಳ್ಳಿಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಎಇಇ ಕೃಷ್ಣಮೂರ್ತಿ ಅವರಿಗೆ ವೆಂಕಟೇಶ್ ಖಡಕ್ ಸೂಚನೆ ನೀಡಿದರು. ದೊಡ್ಡಹಳ್ಳಿ ಮತ್ತು ತಿರುಮಣಿಯಲ್ಲಿ ಸಬ್ ಸ್ಟೇಷನ್ ನಿರ್ಮಾಣ ಮಾಡಲು ಕ್ರಮವಹಿಸುವಂತೆ ಸೂಚಿಸಿದರು. ಅಲ್ಲದೇ ಪಾವಗಡ ತಾಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಡ ಜನರಿಗೆ ನಿವೇಶನ ಹಂಚುವಂತಹ ಯೋಜನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಜೊತೆ ಪಂಚಾಯಿತಿಗಳು ಸಮನ್ವಯವಾಗಿ ಸ್ಥಳವನ್ನು ಗುರುತಿಸಿ ಟೌನ್ ಪ್ಲಾನಿಂಗ್ ಅಧಿಕಾರಿಗಳೊಂದಿಗೆ ಅನುಮೋದನೆ ಪಡೆಯಬೇಕೆಂದು ಶಾಸಕರು ಸೂಚಿಸಿದರು.