kumbamela- ಮನೆಯಲ್ಲಿಯೇ ಕುಳಿತು ಕೇವಲ 500 ರೂ. ಗೆ ಪವಿತ್ರ ಸ್ನಾನ ಮಾಡಿ ಎಂದು ಜಾಹೀರಾತು ನೀಡಿದ ಪೋಟೋ ವೈರಲ್

ಉತ್ತರ ಪ್ರದೇಶ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬಹಳ ಅದ್ಧೂರಿಯಾಗಿ ಮಹಾ ಕುಂಭಮೇಳ ನಡೆಯುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲೆಂದು ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆ ದಾಖಲೆಯ 10 ಕೋಟಿ ದಾಟಿದೆ ಎಂದು ಸರ್ಕಾರ ತಿಳಿಸಿದೆ. ಭಾರೀ ಜನದಟ್ಟಣೆ, ಕಾಲ್ತುಳಿತ ಮತ್ತು ಇನ್ನಿತರ ಕಾರಣಗಳಿಂದಾಗಿ ಅನೇಕ ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರದಂತಿರುವ ಫೋಟೋವೊಂದು ವೈರಲ್‌ ಆಗಿದ್ದು, ಪ್ರಯಾಗ್‌ರಾಜ್‌ಗೆ ಭೇಟಿ ನೀಡದೆ ಮನೆಯಲ್ಲಿಯೇ ಕುಳಿತು ಕೇವಲ 500 ರೂ. ಗೆ ಪವಿತ್ರ ಸ್ನಾನ ಮಾಡಬಹುದು ಎಂಬ ಡಿಜಿಟಲ್‌ ಸಂಗಮ ಸ್ನಾನದ ಜಾಹೀರಾತನ್ನು ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಇನ್ನೂ ಹೆಚ್ಚಿನವರು ಛೇ ಈ ಬಾರಿ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದುಂಟು. ಈ ನಡುವೆ ಇಲ್ಲೊಂದು ಜಾಹಿರಾತು ಫೋಟೋ ವೈರಲ್‌ ಆಗಿದೆ.ಫೆಬ್ರವರಿ 12 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಇದು ಬ್ಯುಸಿನೆಸ್‌ ಅಂದ್ರೆ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

Author:

share
No Reviews