ಕೊರಟಗೆರೆ : ಜನಸ್ನೇಹಿ ವೈದ್ಯರ ವರ್ಗಾವಣೆಗೆ ಸ್ಥಳೀಯರ ರೋಷಾವೇಶ

ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿರುವುದು.
ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿರುವುದು.
ತುಮಕೂರು

ಕೊರಟಗೆರೆ:

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಕಮರ್‌ ತಪ್ಸಮ್‌ ವೈದ್ಯರಾಗಿ ಕಾರ್ಯ ನಿರ್ವಹಿಸ್ತಾ ಇದ್ದರು. ಆದರೆ ಆ ವೈದ್ಯರನ್ನು ಡಿಎಚ್ ಓ ಡಾ. ನಾಗೇಂದ್ರಪ್ಪ ಮತ್ತು ಕೊರಟಗೆರೆ ಟಿಹೆಚ್ ಓ ವಿಜಯಕುಮಾರ್ ಏಕಾಏಕಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಕಮರ್‌ ತಪ್ಸಮ್‌ ಎಂಬ ಡಾಕ್ಟರ್‌ ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಾಗಿನಿಂದ ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡ್ತಾ ಬಂದಿದ್ದಾರೆ, ಅಲ್ಲದೇ ಜನಸ್ನೇಹಿ ವೈದ್ಯರಾಗಿ ಉತ್ತಮವಾಗಿ ಕೆಲಸ ಮಾಡ್ತಾ ಇದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಹೀಗಾಗಿ ಈ ವೈದ್ಯರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬೇಡಿ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರು ಆದೇಶ ಹೊರಡಿಸಿದ್ದರು.

ಆದರೆ ಗೃಹ ಸಚಿವರ ಆದೇಶಕ್ಕೂ ಕೇರ್‌ ಮಾಡದ DHO ಡಾ. ನಾಗೇಂದ್ರಪ್ಪ ಮತ್ತು ಕೊರಟಗೆರೆ ಟಿಹೆಚ್ ಓ ವಿಜಯಕುಮಾರ್ ಅವರು ಡಾಕ್ಟರ್‌ ಕಮರ್‌ ತಪ್ಸಮ್‌ ಅವರನ್ನು ಬೇರೆಡೆಗೆ ನಿನ್ನೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ DHO, THO ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವೈದ್ಯೆ ಕಮರ್‌ ತಪ್ಸಮ್‌ ಅವರು ಹಿರಿಯರು, ಮಹಿಳೆಯರು ಮತ್ತು ಮಕ್ಕಳ ಜೊತೆ ಸೌಜನ್ಯದಿಂದ ವರ್ತಿಸುತ್ತಾರೆ. ಜೊತೆಗೆ ಸಂಜೆ 6ಗಂಟೆವರೆಗೂ ಉತ್ತಮವಾದ ಚಿಕಿತ್ಸೆ ಕೊಡ್ತಾ ಇದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆಯನ್ನು ಒಪ್ಪುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸದ್ಯ ವಡ್ಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರವಾದ ವೈದ್ಯರಾಗಿ ಕೆಲಸ ಮಾಡ್ತಾ ಇರೋ ಪ್ರಕಾಶಗೌಡ ಎಂಬುವವರು ಈ ಮೊದಲು ಅಕ್ಕಿರಾಂಪುರ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾ ಇದ್ದರು. ಆದರೆ ಅವರು ಕರ್ತವ್ಯ ಆರೋಪದ ಅಡಿಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಇವರ ಜಾಗಕ್ಕೆ ಕಮರ್‌ ತಪ್ಸಮ್‌ ಅವರನ್ನು ನೇಮಿಸಲಾಗಿದ್ದು, ಉತ್ತಮವಾಗಿ ಕೆಲಸ ಮಾಡ್ತಾ ಇದ್ದರು. ಆದರೆ ಪಾವಗಡದ ಪ್ರಭಾವಿ ವ್ಯಕ್ತಿಗಳ ಒತ್ತಡದಿಂದಾಗಿ ಕಮರ್‌ ತಪ್ಸಮ್‌ ಅವರನ್ನು ಏಕಾಏಕಿ ಟ್ರಾನ್ಸ್ಫರ್‌ ಮಾಡಿದ್ದು, ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದಂತೆ ಆಗ್ರಹಿಸಿದ್ದಾರೆ.

ಅದೇನೆ ಆಗಲಿ, ಜನಸ್ನೇಹಿಯಾಗಿ ಅಂತಾ ಹೆಸರು ಮಾಡುವುದು ಅಷ್ಟು ಸುಲಭ ಅಲ್ಲ. ಕೆಲಸ ಎಲ್ಲರೂ ಮಾಡ್ತಾರೆ ಆದರೆ ಜನರನ್ನು ಮೆಚ್ಚಿಸುವಂತೆ ಕೆಲಸ ಮಾಡುವುದು ಅಪರೂಪ. ಆದರೆ ಕಮರ್‌ ತಪ್ಸಮ್‌ ಎಂಬ ವೈದ್ಯರು ಸ್ಥಳೀಯ ಜನರಿಂದ ಭಾರೀ ಮೆಚ್ಚುಗೆ ಪಟ್ಟಿದ್ದಾರೆ. ಆದರೆ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದು ಮಾತ್ರ ಖಂಡನೀಯ. ಅಧಿಕಾರಿಗಳು ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡಬೇಕೆ ಹೊರತು ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡೋದಲ್ಲ. ಈ ಬಗ್ಗೆ DHO ಮತ್ತು THO ಗಮನ ಹರಿಸಿ ವೈದ್ಯರ ವರ್ಗಾವಣೆಯನ್ನು ರದ್ದುಗೊಳಿಸಿ ಜನರಿಗೆ ಉಪಕಾರ ಮಾಡಬೇಕಿದೆ.

Author:

...
Editor

ManyaSoft Admin

Ads in Post
share
No Reviews