ಕೊರಟಗೆರೆ: ಆಕಸ್ಮಿಕ ಬೆಂಕಿಗೆ ಗುಡಿಸಲು ಸಂಪೂರ್ಣ ಭಸ್ಮ| ಬಡ ಕುಟುಂಬ ಬೀದಿ ಪಾಲು

ಬೆಂಕಿಗಾಹುತಿ ಆಗಿರುವ ಗುಡಿಸಲು
ಬೆಂಕಿಗಾಹುತಿ ಆಗಿರುವ ಗುಡಿಸಲು
ತುಮಕೂರು

ಕೊರಟಗೆರೆ:

ಬೇಸಿಗೆ ಆರಂಭಕ್ಕೂ ಮುನ್ನವೇ ಅಲ್ಲಲ್ಲಿ ಬೆಂಕಿ ದುರಂತಗಳು ಸಂಭವಿಸುತ್ತಲೇ ಇದೆ. ಪಾವಗಡ ಹಾಗೂ ಶಿರಾದಲ್ಲಿ ಬೆಂಕಿ ಬಿದ್ದು ಗುಡಿಸಲುಗಳು ನಾಶವಾದ ಘಟನೆ ಬಳಿಕ ಮತ್ತೊಂದು ಅಗ್ನಿ ದುರಂತ ಜರುಗಿದೆ. ಕೊರಟಗೆರೆ ತಾಲೂಕಿನ ಬಿಡಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಬಿಪಾಳ್ಯದಲ್ಲಿ ಗುಡಿಸಲಿಗೆ ಬೆಂಕಿ ತಗುಲಿದ್ದು, ಗುಡಿಸಲು ಧಗಧಗನೇ ಹೊತ್ತಿ ಉರಿದಿದೆ, ಬೆಂಕಿಯ ಕೆನ್ನಾಲಗೆಗೆ ಗುಡಿಸಲುಗಳು ಸೂಟ್ಟು ಕರಕಲಾಗಿದ್ದು, ಬಡ ಕುಟುಂಬ ಬೀದಿಗೆ ಬಿದ್ದಿದೆ.

ಸಿಬಿಪಾಳ್ಯ ಗ್ರಾಮದ ಶಿಲ್ಪಾ ಜಯರಾಮ್‌ ಎಂಬುವವರಿಗೆ ಸೇರಿದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು. ಬೆಂಕಿ ಅನಾಹುತದಿಂದ ಜೀವನ ಆಧಾರಕ್ಕೆಂದು ಇದ್ದ 4 ಮೇಕೆಗಳು ಹಾಗೂ ದವಸ ಧಾನ್ಯ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗುಡಿಸಲಿನಲ್ಲಿದ್ದ ಮೇಕೆಗಳನ್ನು ಕಾಪಾಡಲು ಹೋದ ಅತ್ತೆ ಸೊಸೆ ಇಬ್ಬರಿಗೂ ಬೆಂಕಿ ತಗುಲಿ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಈ ಕುಟುಂಬದಲ್ಲಿ ಅತ್ತೆ ಸೊಸೆ ಮಗ ಹಾಗೂ ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದು, ಬೆಂಕಿಯ ಕೆನ್ನಾಲಗೆಗೆ ಗುಡಿಸಲು ಸೂಟ್ಟು ಕರಕಲಾಗಿದ್ದು, ಬಡ ಕುಟುಂಬ ಬೀದಿಗೆ ಬಿದ್ದಿದೆ.

ಇನ್ನು ಬೆಂಕಿ ಅನಾಹುತದಿಂದ ಜೀವನ ಆಧಾರಕ್ಕಾಗಿ ಇದ್ದ ಗುಡಿಸಲು ಹಾಗೂ ಗುಡಿಸಲಿನಲ್ಲಿದ್ದ ಮೇಕೆ, ದವಸ ಧಾನ್ಯಗಳು ನಾಶವಾಗಿದ್ದು, ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಬಡ ಕುಟುಂಬಕ್ಕೆ ಆಸರೆ ನೀಡಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Author:

...
Editor

ManyaSoft Admin

Ads in Post
share
No Reviews