HEALTH TIPS: ಕೂಲ್‌ ಡ್ರಿಂಕ್ಸ್‌ ಕುಡಿಯುವ ಬದಲು ಮನೆಯಲ್ಲೇ ಮಾಡಿ ಕುಡಿಯಿರಿ ಈ ಜ್ಯೂಸ್‌

ಇನ್ನೇನು ಬೇಸಿಗೆಕಾಲ ಆರಂಭವಾಗುತ್ತಿದೆ. ಬೇಸಿಗೆಯ ಬಿಸಿಲಿಗೆ ಸ್ವಲ್ಪ ಸಮಯ ಹೊರಗೆ ಹೋಗಿ ಬಂದರೂ ಸಹ ದೇಹವು ಬಹುಬೇಗ ನಿರ್ಜಲೀಕರಣಗೊಳ್ಳುತ್ತದೆ. ಅಲ್ಲದೇ ಬೇಸಿಗೆಯ ಸಮಯದಲ್ಲಿ ಹೆಚ್ಚು ಕಾಯಿಲೆಗಳು ಬರುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಈ ವೇಳೆಯಲ್ಲಿ ಅದಷ್ಟು ಜಾಗರೂಕರಾಗಿದ್ದು, ನಾವು ಆರೋಗ್ಯಕರವಾಗಿರುವುದು ಮುಖ್ಯವಾಗಿರುತ್ತದೆ.

ಬೇಸಿಗೆ ಬಂತೆಂದರೆ ರಸ್ತೆ ಬದಿಯ ಕಲ್ಲಂಗಡಿ ಹಣ್ಣು, ಸೌತೆಕಾಯಿ, ಎಳನೀರು ಮಾರಾಟ ಹೆಚ್ಚಿರುತ್ತದೆ. ಬಿಸಿಲು ಹೆಚ್ಚಿರುವ ಈ ಅವಧಿಯಲ್ಲಿ ಸ್ವಲ್ಪ ಹೊತ್ತು ಹೊರಗೆ ಹೋದರೆ ದೇಹ ನಿರ್ಜಲೀಕರಣಗೊಳ್ಳುತ್ತದೆ. ಒಣ ಚರ್ಮ, ತಲೆನೋವು ಮತ್ತು ವಾಂತಿ ಮುಂತಾದ ಸಮಸ್ಯೆಗಳು ತಲೆದೂರುತ್ತದೆ. ಹೀಗಾಗಿ ಆಗ್ಗಾಗ್ಗೆಆದಷ್ಟು ಹೆಚ್ಚು ನೀರು ಕುಡಿಯುತ್ತಿರಬೇಕು. ಬೇಸಿಗೆಯ ಆಹಾರಗಳಾದ ಎಳನೀರು, ಸೌತೆಕಾಯಿ, ಕಲ್ಲಂಗಡಿಗಳು ನೈಸರ್ಗಿಕವಾಗಿರುವುದರಿಂದ ಅವು ದೇಹಕ್ಕೆ ಹಾನಿಕಾರಕವಲ್ಲ. ಇವು ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. 

ಕಲ್ಲಂಗಡಿ ಹಣ್ಣು: ಕಲ್ಲಂಗಡಿಯ್ಲಲಿ ಅಗತ್ಯವಾದ ವಿಟಮಿನ್ ಸಿ, ಲೈಕೋಪೀನ್, ವಿಟಮಿನ್ ಎ, ಪೊಟ್ಯಾಸಿಯಮ್, ಅಮೈನೋ ಆಮ್ಲಗಳು, ಸೋಡಿಯಂ ಮತ್ತು ಕ್ಯಾಲೋರಿಗಳಿವೆ. ಇದು ನೈಸರ್ಗಿಕ ಅಸಿಟಿಕ್ ಆಮ್ಲವನ್ನು ಹೊಂದಿದ್ದು ಅದು ಹೊಟ್ಟೆ ತುಂಬುವುದು ಮಾತ್ರವಲ್ಲದೆ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುವ ಲೈಕೋಪೀನ್ ಅನ್ನು ಸಹ ಹೊಂದಿದೆ.

ಮೊಸರು: ಮೊಸರಿನಲ್ಲಿ ಲ್ಯಾಕ್ಟೋಬಾಸಿಲಸ್ ಎಂಬ ಉತ್ತಮ ಬ್ಯಾಕ್ಟೀರಿಯಂ ಇದ್ದು ದೇಹಕ್ಕೆ ಇದು ಒಳ್ಳೆಯದು. ಇವು ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತವೆ. ಮೆದುಳಿನ ಬೆಳವಣಿಗೆಗೆ ಸಹಕಾರಿ. ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. 

ಮಜ್ಜಿಗೆ: ಇದು ನಿಮ್ಮ ದೇಹವನ್ನು ತಂಪಾಗಿಸುತ್ತದೆ. ದೇಹದ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಖನಿಜಗಳು ಮತ್ತು ವಿಟಮಿನ್‌ಗಳನ್ನು ಹೊಂದಿದ್ದು, ನಮ್ಮ ದೇಹವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ದೇಹದ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

ತೆಂಗಿನಕಾಯಿ: ಎಳನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಜೊತೆಗೆ ಜೀರ್ಣಕಾರಿ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ದೇಹವನ್ನು ಹೆಚ್ಚು ತಂಪಾಗಿರಿಸುತ್ತದೆ.

ಸೌತೆಕಾಯಿ: ಸೌತೆಕಾಯಿಯಲ್ಲಿ ನೀರು ಅಧಿಕವಾಗಿರುತ್ತದೆ. ಇದು ನಮ್ಮ ದೇಹವನ್ನು ತಂಪಾಗಿಸುತ್ತದೆ. ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೂದಲು ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ. ಇದನ್ನು ಸಲಾಡ್ ಅಥವಾ ಜ್ಯೂಸ್ ಆಗಿ ಕುಡಿಯುವುದು ಉತ್ತಮ.

 

Author:

...
Sub Editor

ManyaSoft Admin

share
No Reviews