ಮೈಸೂರು ಪಾಕ್ ಕರ್ನಾಟಕದಿಂದ ಜನಪ್ರಿಯವಾದ ಸಿಹಿ ತಿನಿಸಾಗಿದೆ. ಮೈಸೂರು ಪಾಕನ್ನು ತುಪ್ಪ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. "ಪಾಕ್" ಎಂಬ ಪದವು ಪಾಕದಿಂದ ಹುಟ್ಟಿಕೊಂಡಿತು, ಇದು ಮೈಸೂರು ಪಾಕ್‌ನಲ್ಲಿ ಸಿಹಿಗಾಗಿ ಬಳಸುವ ಸಕ್ಕರೆ ಪಾಖವನ್ನು ಸೂಚಿಸುತ್ತದೆ. ಉತ್ತಮ ಗುಣಮಟ್ಟದ ಮೈಸೂರು ಪಾಕ್ ಬಾಯಲ್ಲಿಟ್ಟುಕೊಂಡಾಗ ಜಗಿಯುವ ಅವಶ್ಯಕತೆ ಇಲ್ಲದೆಯೇ ಕರಗುತ್ತದೆ. ಎಲ್ಲರೂ ಆಸ್ವಾದಿಸುವ ಮೈಸೂರು ಪಾಕ್‌ಗೆ ವಿಶ್ವದೆಲ್ಲೆಡೆ ಬೇಡಿಕೆಯಿದೆ. ಮೈಸೂರು ಮಹಾರಾಜರ ಅರಮನೆಯ ಅಡಿಗೆ ಮನೆಯಲ್ಲಿ ಬಾನಸಿಗನೊಬ್ಬನಿಂದ ಆಕಸ್ಮಿಕವಾಗಿ ಮೈಸೂರು ಪಾಕ್ ಕಂಡುಹಿಡಿಯಲ್ಪಟ್ಟಿತು ಮತ್ತು ಇದು ತಕ್ಷಣ ಮಹಾರಾಜರ ಮೆಚ್ಚುಗೆಗೆ ಪಾತ್ರವಾಯಿತು ಎಂದು ನಂಬಲಾಗಿದೆ.
ಮೈಸೂರು ಪಾಕ್ ತಯಾರಿಸುವ ವಿಧಾನ
*ಹಸುವಿನ ಹಾಲಿನ ತುಪ್ಪವನ್ನು ಬಿಸಿಯಾಗುವವರೆಗೆ ಹದವಾಗಿ ಬೆಂಕಿಯಲ್ಲಿ ಬಿಸಿ ಮಾಡಿ, ನಂತರ ಕಡೆ ಹಿಟ್ಟನ್ನು ಬಿಸಿ ತುಪ್ಪಕ್ಕೆ ಸೇರಿಸಿ ಮಿಶ್ರಣವು ಕಂದು ಬಣ್ಣಕ್ಕೆ ತಿರುಗುವವರೆಗೆ ಹಲವಾರು ನಿಮಿಷಗಳ ಕಾಲ ನಿರಂತರವಾಗಿ ಹುರಿಯಿರಿ.
*ಸಕ್ಕರೆಯನ್ನು ನೀರಿನಲ್ಲಿ ಬೆರೆಸಿ ಪಾಕವಾಗುವವರೆಗೆ ಕುದಿಸಿ. ನಂತರ ಮೊದಲೇ ತಯಾರಿಸಿದ ತುಪ್ಪ ಮತ್ತು ಕಡಲೆ ಹಿಟ್ಟಿನ ಮಿಶ್ರಣವನ್ನು ಪಾಕಕ್ಕೆ ಸೇರಿಸಿ ನಿರಂತರವಾಗಿ ಕಲಸಲಾಗುತ್ತದೆ. ಹೀಗೆ ಮಾಡಿದರೆ ಮೈಸೂರು ಪಾಕ್ ಸಿದ್ದವಾಗುತ್ತದೆ.