KITCHEN TIPS: ಸಿಂಪಲ್‌ & ಟೇಸ್ಟಿ ಫಿಶ್‌ ಕರಿ ಮಾಡುವ ವಿಧಾನ

KITCHEN TIPS: 

ಫಿಶ್‌ ಕರಿ

ಬೇಕಾಗುವ ಸಾಮಗ್ರಿಗಳು: 

  • ಮೀನು - 4 
  • ಹಸಿಶುಂಠಿ - 1 ಚಿಕ್ಕ ಚಮಚ
  • ಈರುಳ್ಳಿ - 5-8 (ಹೆಚ್ಚಿದ್ದು)
  • ಬೆಳ್ಳುಳ್ಳಿ - 5-8 ಎಸಳು (ಹೆಚ್ಚಿದ್ದು)
  • ಕರಿಬೇವು - ಸ್ವಲ್ಪ
  • ಹುಣಸೆಹುಳಿಯ ರಸ - ಅರ್ಧ ಬಟ್ಟಲು
  • ಕೊಬ್ಬರಿ ಎಣ್ಣೆ - 2 ದೊಡ್ಡ ಚಮಚ
  • ಟೊಮೇಟೋ- 1 (ಹೆಚ್ಚಿದ್ದು)
  • ಮೆಣಸಿನ ಪುಡಿ - 2 ಚಿಕ್ಕ ಚಮಚ
  • ದನಿಯ ಪುಡಿ - ¾ ಚಿಕ್ಕ ಚಮಚ
  • ಕಾಳುಮೆಣಸಿನ ಪುಡಿ - 1 ಚಿಕ್ಕ ಚಮಚ
  • ಅರಿಶಿನ ಪುಡಿ - ¼ ಚಿಕ್ಕ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ: 

ಮೀನನ್ನು ಚೆನ್ನಾಗಿ ತೊಳೆಯಿರಿ. ಒಂದು ಪಾತ್ರೆಯಲ್ಲಿ ಎಲ್ಲಾ ಮಸಾಲೆ ಪದಾರ್ಥಗಳನ್ನು ಅಂದರೆ, ಈರುಳ್ಳಿಯ ಅರ್ಧ ಭಾಗ, ದನಿಯಾ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಮೆಣಸಿನ ಪುಡಿ, ಉಪ್ಪು ಟೊಮೇಟೋ ಎಲ್ಲವನ್ನೂ ಬ್ಲೆಂಡರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ  ಪಾತ್ರೆಯನ್ನು ಒಲೆಯ ಮೇಲಿಟ್ಟು ಬಿಸಿಮಾಡಿ. ಕೊಂಚ ಬಿಸಿಯಾದ ಬಳಿಕ ಎಣ್ಣೆ ಹಾಕಿ ಒಂದು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಈರುಳ್ಳಿ ಕೆಂಪಗಾಗುವವರೆಗೆ ಬಾಡಿಸಿ.ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಈ ಮಸಾಲೆಯಿಂದ ಎಣ್ಣೆ ಬಿಡುವವರೆಗೂ ತಿರುವುತ್ತಿರಿ.ಇದೀಗ ಹುಣಸೆ ರಸ ಬೆರೆಸಿ ಮಿಶ್ರಣ ಮಾಡಿ. ನಿಮ್ಮ ಆದ್ಯತೆಗೆ ತಕ್ಕಷ್ಟು ನೀರು ಸೇರಿಸಿ ನಡುನಡುವೆ ತಿರುವುತ್ತಾ ಕುದಿಸಿ. ನೀರು ಕುದಿಯಲು ಆರಂಭವಾದ ಬಳಿಕ ಮೀನು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮುಚ್ಚಳ ಮುಚ್ಚಿ ಮೀನು ಬೇಯುವವರೆಗೂ ಮಧ್ಯಮ ಉರಿಯಲ್ಲಿ ಕುದಿಸಿ. ಕೆಲವು ನಿಮಿಷಗಳ ಬಳಿಕ ಸಾರಿನ ರುಚಿಯನ್ನು ನೋಡಿ ಅಗತ್ಯವೆನಿಸಿದಷ್ಟು ಉಪ್ಪು ಸೇರಿಸಿ. ಸ್ವಲ್ಪ ಸಮಯ ಕುದಿಸಿ. ಮೀನು ಬೆಂದಿದೆ ಎಂದು ಖಾತ್ರಿಯಾದ ಬಳಿಕ ಪಾತ್ರೆಯನ್ನು ಒಲೆಯ ಮೇಲಿನಿಂದ ಕೆಳಗಿಳಿಸಿ. ಇದೀಗ ರುಚಿಕರವಾದ ಫಿಶ್ ಕರಿ ಸವಿಯಲು ಸಿದ್ಧ.

 

Author:

...
Keerthana J

Copy Editor

prajashakthi tv

share
No Reviews