KITCHEN TIPS: ಬೆಂಡೆಕಾಯಿ ರವಾ ಫ್ರೈ ಮಾಡುವ ವಿಧಾನ

ಬೆಂಡೆಕಾಯಿ ರವಾ  ಫ್ರೈ
ಬೆಂಡೆಕಾಯಿ ರವಾ ಫ್ರೈ
ಆರೋಗ್ಯ-ಜೀವನ ಶೈಲಿ

KITCHEN TIPS: 

ಬೆಂಡೆಕಾಯಿ ರವಾ ಫ್ರೈ

ಬೇಕಾಗುವ ಸಾಮಗ್ರಿಗಳು :

ಬೆಂಡೆಕಾಯಿ-20

ಖಾರದ ಪುಡಿ- 1 ಚಮಚ

ದನಿಯಾ ಪುಡಿ- 1 ಚಮಚ

ಇಂಗು- ಸ್ವಲ್ಪ

ರವೆ- 1/4 ಬಟ್ಟಲು

ಉಪ್ಪು-ರುಚಿಗೆ ತಕ್ಕಷ್ಟು

ಅರಿಶಿನ ಪುಡಿ- ಸ್ವಲ್ಪ

ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು

ಜೀರಿಗೆ ಪುಡಿ- ಅರ್ಧ ಚಮಚ

ಮಾಡುವ ವಿಧಾನ :

ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ನೀರಿನಂಶವನ್ನೆಲ್ಲಾ ಒರೆಸಿಕೊಳ್ಳಿ. ನಂತರ  ಬೆಂಡೆಕಾಯಿಯನ್ನು  ಉದ್ದಕ್ಕೆ 4 ಭಾಗವಾಗಿ ಸೀಳಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಖಾರದಪುಡಿ, ದನಿಯಾ ಪುಡಿ, ಇಂಗು, ಉಪ್ಪು, ಅರಿಸಿನ ಪುಡಿ, ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಹಾಗೇ ಬಿಡಿ. ಬೆಂಡೆಕಾಯಿ ನೀರು ಬಿಡುತ್ತದೆ. ನಂತರ  ಒಂದು ತಟ್ಟೆಯಲ್ಲಿ ರವೆ ಇಟ್ಟುಕೊಳ್ಳಿ. ಒಂದು ಅಗಲವಾದ  ಪಾತ್ರೆಗೆ ಎಣ್ಣೆ ಹಾಕಿ ಮಸಾಲೆ  ಹಾಕಿಟ್ಟುಕೊಂಡ  ಬೆಂಡೆಕಾಯಿಯನ್ನು  ರವೆಯಲ್ಲಿ  ಹೊರಳಿಸಿ ಎಣ್ಣೆಗೆ  ಫ್ರೈ ಮಾಡಿಕೊಂಡರೆ ರುಚಿಕರವಾದ ಬೆಂಡೆಕಾಯಿ ರವಾ ಫ್ರೈ ಸವಿಯಲು ಸಿದ್ಧ. 

 

Author:

...
Keerthana J

Copy Editor

prajashakthi tv

share
No Reviews