ಸಿನಿಮಾ : ಬಾಲಿವುಡ್ ನಟ ಹೃತಿಕ್ ರೋಶನ್‌ ಜೊತೆ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲಂಸ್‌

ಸಿನಿಮಾ : ಕೆಜಿಎಫ್, ಕಾಂತಾರ, ಸಲಾರ್ ಸೇರಿದಂತೆ ಹಿಟ್ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೆಸರುಗಾರಿಯಾಗಿರುವ ಹೊಂಬಾಳೆ ಫಿಲಂಸ್ ಇದೀಗ ಬಾಲಿವುಡ್‌ನ ಹೆಸರಾಂತ ನಟ ಹೃತಿಕ್ ರೋಷನ್ ಜತೆಯಾಗಿ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.

‘ಗ್ರೀಕ್ ಗಾಡ್’ ಎನ್ನುತ್ತಲೇ ಪ್ರಸಿದ್ಧರಾದ ಹೃತಿಕ್ ರೋಷನ್, ತಮ್ಮ ಅಭಿನಯ ಶೈಲಿ, ನೃತ್ಯ ಮತ್ತು ಆಕರ್ಷಕ ವ್ಯಕ್ತಿತ್ವದ ಮೂಲಕ ದೇಶದಾದ್ಯಂತ ಅನೇಕರ ಮನಗೆದ್ದಿದ್ದಾರೆ. ಇಂತಹ ನಟನನ್ನು ಹೊಂಬಾಳೆ ಫಿಲಂಸ್ ತಮ್ಮ ಮುಂದಿನ ಬೃಹತ್ ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದು, ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹೊಂಬಾಳೆ ಫಿಲಂಸ್ ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಘೋಷಿಸಿದ್ದು, “We are proud and excited to welcome the Greek God of Indian cinema, Hrithik Roshan, to the Hombale family. This collaboration marks a new era of storytelling across borders.”ಎಂದು ಕಂಪನಿ ಹೇಳಿದೆ.

ಪೃಥ್ವಿರಾಜ್‌, ಯಶ್‌, ರಿಷಬ್ ಶೆಟ್ಟಿ, ಧನುಷ್‌ ಮುಂತಾದ ಟಾಪ್ ನಟರೊಂದಿಗೆ ಚಲನಚಿತ್ರಗಳನ್ನು ತಯಾರಿಸಿ, ಹೊಂಬಾಳೆ ಫಿಲಂಸ್ ಕನ್ನಡ ಚಿತ್ರರಂಗದ ಗಡಿಗಳನ್ನು ದಾಟಿಸಿ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ. ಈಗ ಹೃತಿಕ್ ರೋಷನ್ ಜೊತೆಯ ಹೊಸ ಪ್ರಯತ್ನದಿಂದ ಈ ಬಿಗ್ ಬ್ಯಾನರ್ ಆಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೊಸ ಅಲೆ ಎಬ್ಬಿಸಲಿದೆ ಎಂಬ ನಿರೀಕ್ಷೆ ಇದೆ.

 

Author:

...
Keerthana J

Copy Editor

prajashakthi tv

share
No Reviews