ಶಿರಾ : ನೀರಿನ ಹಾಹಾಕಾರಕ್ಕೆ ಶಿರಾದಲ್ಲಿ ಸಹಾಯವಾಣಿ ಆರಂಭ

ತಹಶೀಲ್ದಾರ್‌ ಕೆ.ಎಸ್ ರೇಷ್ಮಾ
ತಹಶೀಲ್ದಾರ್‌ ಕೆ.ಎಸ್ ರೇಷ್ಮಾ
ತುಮಕೂರು

ಶಿರಾ:

ಇನ್ನೇನು ಬೇಸಿಗೆ ಆರಂಭವಾಗಿದ್ದು ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಶಿರಾ ತಾಲೂಕು ಹೇಳಿ ಕೇಳಿ ಬರದ ತಾಲೂಕಾಗಿದ್ದು ತಾಲೂಕಿನಲ್ಲಿ ನೀರಿಗೆ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಶಿರಾದಲ್ಲಿ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಅವರು, ಮಾರ್ಚ್ 10 ರಂದು  ನಡೆಸಿದ ಸಭೆಯಲ್ಲಿ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌‌ ಕೆ.ಎಸ್ ರೇಷ್ಮಾ ಕ್ರಮ ಕೈಗೊಂಡಿದ್ದಾರೆ. ಶಿರಾ ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಈಗಾಗಲೇ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದಲ್ಲಿ ಸಹಾಯವಾಣಿ ಕೇಂದ್ರಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಶಿರಾ ತಹಶೀಲ್ದಾರ್‌ ರೇಷ್ಮಾ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ತಿಳಿಸಿದ್ದಾರೆ.

Author:

...
Editor

ManyaSoft Admin

Ads in Post
share
No Reviews