ಇತ್ತೀಚಿಗೆ ಅಧಿಕ ತೂಕದಿಂದ ಅನೇಕ ಜನರು ಬಳಲುತ್ತಿರುತ್ತಾರೆ. ಅದಕ್ಕೆ ಕಾರಣ ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು, ಒಂದೇ ಕಡೆ ಕುಳಿತು ಕೊಂಡು ಕೆಲಸ ಮಾಡುವುದು, ಆಯಿಲ್ ಫುಡ್, ಜಂಕ್ ಫುಡ್‌ಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವುದು. ಇದೆಲ್ಲಾ ಕಾರಣಗಳಿಂದ ತೂಕ ಹೆಚ್ಚುತ್ತದೆ.
ತೂಕ ಕಡಿಮೆಯಾಗಲು ಮನೆ ಮದ್ದುಗಳು
*೨ ಚಮಚ ಜೀರಿಗೆಯನ್ನು ತೆಗದುಕೊಂಡು ೨ ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಕುದಿಸಿ ಶೋದಿಸಿಕೊಂಡ ನೀರನ್ನು ಉಗುರು ಬೆಚ್ಚಗೆ ಮಾಡಿ ಕುಡಿಯಿರಿ. ಒಂದು ದಿನದಲ್ಲಿ ಎರರಿಂದ ಮೂರು ಬಾರಿ ಜೀರಿಗೆ ನೀರನ್ನು ಕುಡಿಯುವುದರಿದ ನಿಮ್ಮ ಜೀರ್ಣ ಕ್ರಿಯೆ ಸುಗಮವಾಗಿ, ಸರಳವಾಗಿ ನಿಮ್ಮ ಹೊಟ್ಟೆ ಸುತ್ತಯಿರುವ ಕೊಬ್ಬು, ಮತ್ತು ಅಧಿಕ ತೂಕ, ಕೆಟ್ಟ ಕೊಲೆಸ್ಟಾಲ್ ಅನ್ನು ಹೋಗಿಸುತ್ತದೆ.
* ಉಗುರು ಬೆಚ್ಚಗಿನ ನೀರು ಒಂದು ಗ್ಲಾಸ್ ನೀರಿಗೆ ಎರಡು ಚಮಚ ಜೇನುತುಪ್ಪ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ನಂತರ ೪೫ ನಿಮಿಷ ಯಾವುದೇ ಆಹಾರವನ್ನು ಸೇವಿಸಬಾರದು.
*ಒಂದು ಗ್ಲಾಸ್ ನೀರನ್ನು ಕುದಿಸಿ ಒಂದು ಇಂಚು ಶುಂಠಿಯನ್ನು ಜೆಜ್ಜಿ ಸುಮಾರು ೧೦ ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ನಂತರ ಒಂದು ಚಮಚ ನಿಂಬೆ ರಸ,ಒಂದು ಚಮಚ ಜೇನುತುಪ್ಪ ಹಾಕಿ ಬಿಸಿ ಬಿಸಿ ಇದ್ದಾಗಲೇ ಸೇವಿಸಿ. ಒಂದು ದಿನಕ್ಕೆ ಎರಡು ಬಾರಿ ಇದನ್ನು ಕುಡಿಯಿರಿ. ಶುಂಠಿಯ ಸೇವನೆಯಿಂದ ದೇಹದಲ್ಲಿ ಒತ್ತಡದ ಕಾರಣ ಉತ್ಪತ್ತಿ ಯಾಗುವ ಕೊಲೆಸ್ಟ್ರಾಲ್ ಎಂಬ ಹಾರ್ಮೋನ್ ಉತ್ಪತ್ತಿಯನ್ನು ತಡೆಯುತ್ತದೆ.
*ದಾಲ್ಚಿನ್ನಿ ಬಳಕೆ ಮಾಡಿದರೆ, ಅದರಿಂದ ತೂಕ ಇಳಿಸಲು ಸಹಕಾರಿ. ದಾಲ್ಚಿನ್ನಿ ನೀರು ಕುಡಿದರೆ, ಅದರಿಂದ ಸಕ್ಕರೆ ಸೇವನೆ ಬಯಕೆಯು ಕಡಿಮೆ ಆಗುವುದು ಮತ್ತು ರಕ್ತದಲ್ಲಿ ಇನ್ಸುಲಿನ್ ಮಟ್ಟವು ನಿಯಂತ್ರಣದಲ್ಲಿ ಇರುವುದು. ಒಂದು ಲೋಟ ಬಿಸಿ ನೀರಿಗೆ ಎರಡು ಚಕ್ಕೆ ದಾಲ್ಚಿನ್ನಿ ಮತ್ತು ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಇದರ ಬಳಿಕ ಸೋಸಿಕೊಳ್ಳಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಬೇಕು. ಇದರಿಂದ ತೂಕ ಇಳಿಸಲು ತುಂಬಾ ನೆರವಾಗುತ್ತದೆ.