ಹಾಸನ: ಯುವಕನ ರೀಲ್ಸ್ ಎಡವಟ್ಟು | ಪ್ರಪಾತಕ್ಕೆ ಉರುಳಿ ಬಿದ್ದ ಯುವಕ

ಗವಿ ಬೆಟ್ಟ, ಸಕಲೇಶಪುರ
ಗವಿ ಬೆಟ್ಟ, ಸಕಲೇಶಪುರ
ಹಾಸನ

ಹಾಸನ:

ಇತ್ತೀಚೆಗೆ ಯುವ ಜನತೆಯಲ್ಲಿ ರೀಲ್ಸ್‌ ಹುಚ್ಚು ಹೆಚ್ಚಾಗಿದ್ದು, ಅತೀ ಹೆಚ್ಚು ವೀಕ್ಷಣೆ ಪಡೆಯುವುದಕ್ಕೊಸ್ಕರ ಯುವ ಜನತೆ ನಾನಾ ಸರ್ಕಸ್‌ ಮಾಡುತ್ತಾರೆ. ಅದರಿಂದ ತಮ್ಮ ಪ್ರಾಣ ಸಹ ಕಳೆದುಕೊಳ್ಳುತ್ತಾರೆ. ಇದೀಗ ಅಂತದ್ದೇ ಮತ್ತೊಂದು ಘಟನೆ ನಡೆದಿದೆ. ರೀಲ್ಸ್‌ ಮಾಡಲು ಹೋಗಿ ಯುವಕನೊಬ್ಬ ಆಯತಪ್ಪಿ ಬೆಟ್ಟದಿಂದ ಉರುಳಿ ಬಿದ್ದು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ನಡೆದಿದೆ.

ರಾಶಿದ್‌ (18) ಗಾಯಗೊಂಡ ಯುವಕನಾಗಿದ್ದಾನೆ. ಶನಿವಾರಸಂತೆಯಿಂದ ಗವಿಬೆಟ್ಟಕ್ಕೆ ತನ್ನ ಇಬ್ಬರು ಗೆಳೆಯರೊಂದಿಗೆ ಭೇಟಿ ನೀಡಿದ್ದ ರಾಶಿದ್‌, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ, ಈ ವೇಳೆ ಬೆಟ್ಟದ ತುದಿಯಿಂದ ಆಯ ತಪ್ಪಿ ಪ್ರಪಾತಕ್ಕೆ ಜಾರಿ ಬಿದಿದ್ದಾನೆ, ಪರಿಣಾಮ ಆತನ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ಹಾಗೂ ಯಸಳೂರು ಠಾಣೆ ಪೊಲೀಸರ ಸಹಾಯದಿಂದ ಗಾಯಾಳು ಯುವಕನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಹಾಸನದ ಹಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಕುರಿತು ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
 

Author:

...
Editor

ManyaSoft Admin

share
No Reviews