ಗುಬ್ಬಿ : ಪ್ರಾಥಮಿಕ ಪಾಠಶಾಲೆಯಲ್ಲಿ 75 ನೇ ವರ್ಷದ ಅಮೃತ ಮಹೋತ್ಸವ ಸಮಾರಂಭ

ಗುಬ್ಬಿ :

ಗುಬ್ಬಿ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 75 ನೇ ವರ್ಷದ ಅಮೃತ ಮಹೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಮಾಜಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ರಾಜ್ಯ ಸಭೆ ಮಾಜಿ ಸದಸ್ಯೆ ಡಾ.ಬಿ ಜಯಶ್ರೀ , ಉದ್ಯಮಿಗಳಾದ ಚನ್ನಬಸವಪ್ರಸಾದ್‌ , ಸುರೇಶ್‌, ವಿಶ್ವನಾಥ್‌, ಶಶಿಧರ್‌ ಗೌಡ ಸೇರಿದಂತೆ ಶಾಲಾ ಶಿಕ್ಷಕರು ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗಿವಹಿಸಿದ್ದರು.

ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳ ಜೊತೆ ನಿಂತು ಅವರ ಕಷ್ಟಗಳನ್ನು ಪರಿಹರಿಸುವ ಕೆಲ್ಸ ಮಾಡೋದು ಅಷ್ಟು ಸುಲಭದ ಮಾತಲ್ಲ, ಅಲ್ಲದೇ ಪ್ರಸ್ತುತ ದಿನಗಳಲ್ಲಿ ಮೌಡ್ಯ ನಿರಾಸೆ, ಧೋರಣೆಗಳು ನಮ್ಮನ್ನು ಕಿತ್ತು ತಿನ್ನುತ್ತಿದೆ. ಅಂತದರಲ್ಲಿ ಈ ಶಾಲೆ ಉಳಿವಿಗೆ ಬಹಳಷ್ಟು ಹೋರಾಟ ಮಾಡಿರೋ ಕಾಡಶೆಟ್ಟಿಹಳ್ಳಿ ಸತೀಶ್ ಸೇವೆ ಅವಿಸ್ಮರಣೀಯ ಎಂದರು, ಇನ್ನು  ನಾವೆಲ್ಲ ಯಾಕೆ ಬದುಕ್ತಿದಿವಿ ಅಂದರೆ ನಮ್ಮಿಂದ ಬೇರೆಯವರಿಗೆ ಉಪಯೋಗವಾಗ್ಲಿ ಅಂತ, ಅಲ್ಲದೇ ಇಷ್ಟೆಲ್ಲ ಹೋರಾಟಗಳನ್ನು ಮಾಡೋದು ನಮ್ಮನ್ನ ಯಾರಾದರೂ ಗುರುತಿಸಿ ಗೌರವಿಸಲಿ ಅನ್ನೋದೇ ಹೋರಾಟದ ಮೂಲವಾಗಿದೆ ಎಂದರು. ಇನ್ನು ನಾವು ನಮ್ಮ ಬಗ್ಗೆ ಯೋಚನೆ ಮಾಡದೇ ಬರೀ ಬೇರೆಯವರ ಬಗ್ಗೆ ಟೀಕೆ ಮಾಡಿ, ವ್ಯಂಗ್ಯ ಮಾಡೋದು ನಮ್ಮ ನಡೆ-ನುಡಿಗಳ ಬಗ್ಗೆ ತೋರಿಸುತ್ತೇ. ಬಿಟ್ಟರೆ ಬೇರೇನು ಇಲ್ಲ ಅಂದರು. ಮನಸ್ಸು ನಾವು ಯಾವುದಕ್ಕೆ ಹೆಚ್ಚು ಗಮನ ಕೊಡುತ್ತೀವೋ ಅತ್ತ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂದು ತಿಳಿಸಿದರು.
 

 

Author:

share
No Reviews