ಸಚಿವರ ಮನೆಯಲ್ಲಿ ಔತಣಕೂಟರಾಜ್ಯ
ಬೀದರ್ : ಸಭೆ ಬಗ್ಗೆ ಬೀದರ್ ನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ್ ಖಂಡ್ರೆ, ಯಾವುದೇ ಡಿನ್ನರ್ ಮಿಟಿಂಗ್ ಇಲ್ಲ ಅಂತ ಹೇಳಿದ್ದಾರೆ. ಸರ್ಕಾರ ಬಹಳ ಸುಭದ್ರವಾಗಿದೆ, ಐದು ವರ್ಷ ಉತ್ತಮ ಆಡಳಿತ ಕೊಡುತ್ತೇವೆ, ಮುಂದಿನ ಐದು ವರ್ಷ ನಾವೇ ಸರ್ಕಾರ ಮಾಡ್ತೇವೆ, ನಮಗೆ ಬಹುಮತ ಸಿಗುತ್ತೆ. ಅದಕ್ಕೆ ಬಿಜೆಪಿಯವರು ಮೈಕೈ ಪರಚಿಕೊಳ್ಳುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ವಿಚಾರಕ್ಕೆ ಪ್ರತಿಕಿಯೆ ನೀಡಿದ ಅವರು ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಫಾಯಿ ಇದ್ದೇನೆ. ಸದ್ಯಕ್ಕೆ ಯಾವ ಹುದ್ದೆಗಳು ಖಾಲಿ ಇಲ್ಲ, ಖಾಲಿ ಆದಾಗ ಆಲೋಚನೆ ಮಾಡೋಣ, ಅರಣ್ಯ ಸಚಿವನಾಗಿ ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ನಿಷ್ಠಾವಂತರು, ಸಂಘಟನಾತ್ಮಕವಾಗಿ ಕೆಲಸ ಮಾಡುವವರನ್ನ ಹೈಕಮಾಂಡ್ ಗಮನಿಸುತ್ತಿದೆ. ಇದನ್ನೆಲ್ಲಾ ನೋಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ, ನನ್ನ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ನನ್ನ ಅಭಿಪ್ರಾಯ ಕೇಳಿದಾಗ ಪಕ್ಷದ ಚೌಕಟ್ಟಿನಲ್ಲಿ ಹೇಳುತ್ತೇನೆ. ಬಹಿರಂಗವಾಗಿ ನಾನು ಹೇಳಲ್ಲ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಕೂಡ ಆಕಾಂಕ್ಷಿ ಎಂಬುದನ್ನು ಸಚಿವ ಈಶ್ವರ್ ಖಂಡ್ರೆ ವ್ಯಕ್ತಪಡಿಸಿದ್ದಾರೆ.