BUEATY TIPS: ಬ್ಲಾಕ್‌ಹೆಡ್ಸ್‌ ನಿವಾರಣೆಗೆ ಈ ಟಿಪ್ಸ್‌ ಫಾಲೋ ಮಾಡಿ

ಪ್ರತಿಯೊಬ್ಬರೂ ತಮ್ಮ ಚರ್ಮವು ಕಲೆರಹಿತವಾಗಿ ಕಾಂತಿಯುತಾಗಿರಬೇಕೆಂದು ಬಯಸುತ್ತಾರೆ. ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಫೇಶಿಯಲ್, ಸ್ಕಿನ್ ಕೇರ್ ಪ್ಯಾಕ್, ಬ್ಯೂಟಿ ಉತ್ಪನ್ನಗಳನ್ನು ಬಳಸುತ್ತಾರೆ. ಈ ವಸ್ತುಗಳು ಚರ್ಮವನ್ನು ಸುಂದರವಾಗಿಸುತ್ತದೆ, ಆದರೆ ಮೂಗಿನ ಮೇಲಿನ ಕಪ್ಪು ಚುಕ್ಕೆಗಳಂತೆ ಕಾಣುವ ಬ್ಯಾಕ್‌ಹೆಡ್ಸ್‌ಗಳು ನಿಮ್ಮ ಮುಖದ ಅಂದವನ್ನು ಹಾಳುಮಾಡುತ್ತದೆ. ಮೂಗಿನ ಮೇಲೆ ಕಾಣಿಸಿಕೊಳ್ಳುವ ಈ ಕಪ್ಪು ಚುಕ್ಕೆಗಳ ಸಮಸ್ಯೆಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೀವು ಮೂಗಿನ ತುದಿಯಲ್ಲಿ ಬ್ಲ್ಯಾಕ್‌ಹೆಡ್‌ ಸಮಸ್ಯೆಯನ್ನು ಹೊಂದಿದ್ದರೆ ಈ ಟಿಪ್ಸ್‌ಗಳಿಂದ ಬ್ಲ್ಯಾಕ್‌ಹೆಡ್ಸ್‌ಗಳನ್ನು ನಿವಾರಿಸಬಹುದು.

*ಮೂಗಿನ ಮೇಲೆ ಕಪ್ಪು ಚುಕ್ಕೆಗಳಿಂದ ಬಳಲುತ್ತಿರುವವರು ಅವುಗಳನ್ನು ಹೋಗಲಾಡಿಸಲು ವಾರಕ್ಕೆ ಎರಡರಿಂದ ಮೂರು ಬಾರಿ ಸ್ಟೀಮ್ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ.

*ಒಂದು ಬೌಲ್‌ನಲ್ಲಿ ಒಂದು ಚಮಚ ಅಡುಗೆ ಸೋಡಾ ಮತ್ತು ಸ್ವಲ್ಪ ನೀರು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬ್ಲ್ಯಾಕ್ ಹೆಡ್ಸ್ ಮೇಲೆ ಮಸಾಜ್ ಮಾಡಿ. 15 ನಿಮಿಷಗಳ ನಂತರ, ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಮೃದುವಾದ ಟವೆಲ್​ನಿಂದ ಒರೆಸಿಕೊಳ್ಳಿ.

*ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿಯನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಿ. ನಂತರ ಅದನ್ನು ಮೂಗಿನ ಮೇಲೆ ಮಾಸ್ಕ್ ಆಗಿ ಹಚ್ಚಿಕೊಳ್ಳಿ. 10 ರಿಂದ 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

 

 

Author:

...
Sub Editor

ManyaSoft Admin

share
No Reviews