BIDAR: ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದ ಐದು ಮಂದಿ ದುರ್ಮರಣ

ರಸ್ತೆ ಅಪಘಾತ
ರಸ್ತೆ ಅಪಘಾತ
ಬೀದರ್‌

ಬೀದರ್:‌ 

ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಒಂದೇ ಕುಟುಂಬದ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದೆ. ಲಾರಿ ಮತ್ತು ಕ್ರೂಸರ್‌ ನಡುವೆ ಭಿಕರ ಅಪಘಾತ ಸಂಭವಿಸಿದ್ದು 6 ಮಂದಿ ಸಾವನ್ನಪ್ಪಿದ್ದಾರೆ.  ಉಳಿದವರ ಸ್ಥಿತಿ ಚಿಂತಾಜನಕವಾಗಿದೆ.

ಬೀದರ್ ಜಿಲ್ಲೆಯ ಲಾಡಗೇರಿ ಬಡಾವಣೆಯ 12 ನಿವಾಸಿಗಳು ಕ್ರೂಸರ್‌ನಲ್ಲಿ ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ ತೆರಳಿದ್ದರು. ಪ್ರಯಾಗ್‌ರಾಜ್ನ ಕುಂಭಮೇಳ ಮುಗಿಸಿ ಕಾಶಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ವಾರಣಾಸಿ ಬಳಿಯ ಮಿರಾಜ್‌ಪುರ್ ನಗರದ ಬಳಿ ಕ್ರೂಸರ್ ವಾಹನ ಲಾರಿಗೆ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಐವರು ಉಸಿರು ಚೆಲ್ಲಿದ್ದಾರೆ.

ಮೃತಪಟ್ಟ ಐವರು ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದೆ. ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ(35) ಸಂತೋಷ್‌ (43) ನೀಲಮ್ಮ (60) ಸೇರಿದಂತೆ ಆರು ಜನ ಸಾವನ್ನಪ್ಪಿದ್ದಾರೆ. ಉಳಿದವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾಸಿಸಲಾಗಿದೆ. 

 

Author:

share
No Reviews