MANGALORE NEWS : ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ [STATE BANK] ಬಳಿಯ ರಾವ್ ಆ್ಯಂಡ್ ರಾವ್ ವೃತ್ತದ [Rao and Rao circle] ಬಳಿ ಇರುವ ಅಪಾರ್ಟ್ ಮೆಂಟ್ [APARTMENT] ವೊಂದರಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಮಾಹಿತಿ ಕೊಟ್ಟಿದ್ದಾರೆ. ಇನ್ನು ತಕ್ಷಣವೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದೆ.
ಬೆಂಕಿಯಿಂದಾಗಿ ಮನೆಗೆ ಸಾಕಷ್ಟು ನಷ್ಟವಾಗಿದ್ದು, ಮನೆಯಲ್ಲಿದ್ದ ಸೋಫಾ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳು[Electronic devices] ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ. ಇನ್ನು ಮನೆಯಲ್ಲಿ ಬಾಡಿಗೆಗೆ ವಿದ್ಯಾರ್ಥಿಗಳು ವಾಸವಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ಶಾರ್ಟ್ ಸರ್ಕ್ಯೂಟ್ ಹೀಟರ್ ಬಳಕೆ ಸಂದರ್ಭದಲ್ಲಿ ಉಂಟಾದ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಇನ್ನು ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಗ್ನಿಶಾಮಕ ದಳದ [fire brigade] ಸಿಬ್ಬಂದಿ Oxygen mask ಮತ್ತು ಸಿಲಿಂಡರ್ ಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ, ಫ್ಯಾನ್‌ಗಳ ಬಳಕೆ ಮೂಲಕ ಹೊಗೆಯನ್ನು ಹೊರಗೆ ಬಿಡಲಾಯಿತು. ಬೆಂಕಿಯಿಂದಾಗಿ ಸುಮಾರು 75 ಸಾವಿರ ರೂ. ಮೌಲ್ಯದ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.