ಕಲಬುರಗಿ :
ನಿನ್ನೆ ನಡೆದ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯೋರ್ವನ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಲಬುರಗಿಯ ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ದ ಎಫ್ ಐಆರ್ ದಾಖಲಾಗಿದೆ. ನೀಟ್ ಪರೀಕ್ಷೆ ಬರೆಯಲು ಬಂದಿದ್ದ ಶ್ರೀಪಾದ್ ಪಾಟೀಲ್ ಎಂಬ ವಿದ್ಯಾರ್ಥಿ ಧರಿಸಿದ್ದ ಜನಿವಾರವನ್ನು ಪರೀಕ್ಷಾ ಸಿಬ್ಬಂದಿ ಶರಣಗೌಡ ಹಾಗೂ ಗಣೇಶ್ ಎಂಬುವರು ತೆಗೆಸಿದ್ದರು.
ಪರೀಕ್ಷಾ ಸಿಬ್ಬಂದಿ ಈ ನಡೆಗೆ ಅಕ್ರೋಶಗೊಂಡ ಬ್ರಾಹ್ಮಣ ಸಮಾಜ ಪರೀಕ್ಷಾ ಸ್ಥಳದಲ್ಲೇ ಆಗಮಿಸಿ ಬೃಹತ್ ಪ್ರತಿಭಟನೆಯನ್ನು ಮಾಡಿದ್ದರು. ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಸಿ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಅವರ ವಿರುದ್ದ ಕ್ರಮಕೈಗೊಳ್ಳಬೇಕೆಂಧು ವಿದ್ಯಾರ್ಥಿ ಶ್ರೀ ಪಾದ್ ಪಾಟೀಲ್ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದನು. ವಿದ್ಯಾರ್ಥಿ ದೂರಿನ ಮೇರೆಗೆ ಪೊಲೀಸರು ಬಿಎನ್ ಎಸ್ ಕಾಯ್ದೆ 298 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.