BANGALORE : ಬೆಂಗಳೂರು ಮೈಸೂರು ರಸ್ತೆಯ MARKET FLYOVER ಬಳಿ ತಡರಾತ್ರಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ [BIKE ACCIDNT] ಇಬ್ಬರು ಯುವಕರು ದುರ್ಮರಣಕ್ಕೆ ಒಳಗಾದ ದುಃಖದ ಘಟನೆ ನಡೆದಿದೆ. ಎರಡು ಬೈಕ್ಗಳ ನಡುವೆ ಅಪಘಾತವಾದ ಪರಿಣಾಮ ಆಕಾಶ್ [AKASH] ಹಾಗೂ ಅಫ್ಜಲ್ [AFZAL] ಮೃತಪಟ್ಟಿದ್ದಾರೆ.
ಮೃತ ಆಕಾಶ್ ಕೆ.ಪಿ ಅಗ್ರಹಾರ ನಿವಾಸಿಯಾಗಿದ್ದ, ಗ್ರೈಂಡರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಆದ್ರೆ ಸ್ನೇಹಿತ ಮಣಿ ಜೊತೆ ರಾತ್ರಿ ಊಟ ಮಾಡಲು ಬಂದಿದ್ದ. ಇನ್ನೂ ಮತ್ತೊಬ್ಬ ಬೈಕ್ ಸವಾರ ಅಫ್ಜಲ್ ಮಂಗಳೂರು ನಿವಾಸಿಯಾಗಿದ್ದ. ವಿಜಯನಗರದಲ್ಲಿ ವಾಸವಾಗಿದ್ದ. ಅಫ್ಜಲ್ ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಸ್ನೇಹಿತ ಆಶಿಮ್ ಜೊತೆ ಕೆಲಸಕ್ಕೆ ಹೋಗುತ್ತಿದ್ದಾಗ ಮುಂದೆ ಹೋಗ್ತಿದ್ದ ಎಲೆಕ್ಟ್ರಿಕ್ ಬೈಕ್ಗೆ ಹಿಂಬದಿಯಿಂದ ಬಂದ ಎಕ್ಸ್ ಪಲ್ಸ್ ಬೈಕ್ ಗುದ್ದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಜೀವಬಿಟ್ಟಿದ್ದಾರೆ.
ಈ ಭೀಕರ ಅಪಘಾತಕ್ಕೆ ಸಂಬಂಧಪಟ್ಟಂತೆ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆ ದಿದ್ದು, ಅಪಘಾತದ ಸ್ಪಷ್ಟ ಕಾರಣ ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.