TUMAKURU: ಕೋರ್ಟ್‌ ಆವರಣದಲ್ಲೇ ವಿಷ ಸೇವಿಸಿದ ಕಕ್ಷಿದಾರ ರೈತ ಹೈಡ್ರಾಮಾ..?!

ತುಮಕೂರು: 

ತುಮಕೂರಿನ ಕೋರ್ಟ್‌ ಆವರಣದಲ್ಲಿಯೇ ಮನನೊಂದು ಕಕ್ಷಿದಾರ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಹೈಡ್ರಾಮಾವನ್ನೇ ಸೃಷ್ಟಿಸಿದ್ದಾನೆ, ವಕೀಲರು ಕಕ್ಷಿದಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಹಲ್ಲೆಯಿಂದ ಮನನೊಂದ ಶಿರಾ ತಾಲೂಕಿನ ಕಲ್ಲುಕೋಟೆ ಗ್ರಾಮದ ವೃದ್ಧ ರೈತ ಜಗನ್ನಾಥ್‌ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಉಳಿದ ವಕೀಲರು ವಿಷದ ಬಾಟಲ್‌ನನ್ನು ಕಿತ್ತುಕೊಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರೈತ ಜಗನ್ನಾಥ್ ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ವಕೀಲ ಹೇಮಸುಧಾರೆಡ್ಡಿಗೆ ವಕಾಲತ್ತು ವಹಿಸಲು ಕೇಸ್ ನೀಡಿದ್ದರು. 11 ವರ್ಷ ಕಳೆದರೂ ಪ್ರಕರಣ ದಾಖಲಿಸದೆ ರೈತನನ್ನ ಅಲೆದಾಡಿಸುತ್ತಿದ್ದಾರೆ. ಹೀಗಾಗಿ ಜಮೀನು ದಾಖಲೆ ಹಾಗೂ ಹಣ ವಾಪಸ್‌ ನೀಡುವಂತೆ ವಕೀಲ ಹೇಮಸುಧಾರೆಡ್ಡಿ ಬಳಿ ಒತ್ತಾಯ ಮಾಡಿದ್ದಾರೆ. ಈ ವಿಚಾರವಾಗಿ ರೈತ ಹಾಗೂ ವಕೀಲರ ನಡುವೆ ಮಾತಿಗೆ ಮಾತು ಬೆಳೆದು ಕೋರ್ಟ್‌ ಆವರಣದಲ್ಲೇ ವಕೀಲ ಹೇಮಸುಧಾರೆಡ್ಡಿ ಹಾಗೂ ಸಹಚರ ವಕೀಲರು ಗಳಿಂದ ರೈತ ಜಗನ್ನಾಥ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದ್ರಿಂದ ಮಾನಸಿಕವಾಗಿ ನೊಂದ ರೈತ ಜಗನ್ನಾಥ್‌ ಕೋರ್ಟ್‌ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ರೈತರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಜಿಲ್ಲಾಸ್ಪತ್ರೆಗೆ ತುಮಕೂರು ನಗರ ಪೊಲೀಸರು ಭೇಟಿ ನೀಡಿ ರೈತನ ಆರೋಗ್ಯ ವಿಚಾರಿಸಿ ಅವರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ವೇಳೆ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಜಗನ್ನಾಥ್‌ ಆಗ್ರಹಿಸಿದ್ದಾರೆ.

ಇನ್ನು ಜಮೀನಿನ ಡಾಕ್ಯುಂಮೆಂಟ್‌ ಕೇಳಿದ್ದಕ್ಕೆ ವಯಸ್ಸಾದವರ ಮೇಲೆ ಇತರೆ ವಕೀಲರ ಜೊತೆ ಸೇರಿ ಹಲ್ಲೆ ಮಾಡಿದ್ದಾರೆ.ನ್ಯಾಯ ಕೊಡಿಸಬೇಕಾದ ವಕೀಲರೇ ಈ ರೀತಿ ಮಾಡಿದ್ರೆ ಹೇಗೆ..? ಇದೇ ರೀತಿ ಮಾಡಿದ್ರೆ ಜನರು ಕರಿ ಕೋಟ್‌ನ ಬಿಟ್ಟು ಮಾನಭಂಗ ಮಾಡ್ತಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಜಗನ್ನಾಥ್‌ ಅವರ ಪುತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Author:

share
No Reviews