ತುಮಕೂರು:
ಅಲೆಮಾರಿ, ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಎಂದು ಮನೆ ಕಟ್ಟಿಕೊಳ್ಳಲು ಜಿಲ್ಲಾಡಳಿತ ಅಲೆಮಾರಿ ಜನಾಂಗದ ಕುಂದು ಕೊರತೆ ಸಭೆಯಲ್ಲಿ ಹಕ್ಕು ಪತ್ರ ನೀಡಲಾಗಿದೆ. ಆದ್ರೆ ಹಕ್ಕು ಪತ್ರ ಮಾತ್ರ ನೀಡಿದ್ದು, ಮೂರು ವರ್ಷ ಆದ್ರು ಖಾತೆ ಆಗ್ತಿಲ್ಲ, ಇ- ಸ್ವತ್ತು ಸಿಗ್ತಿಲ್ಲ.. ಈ ಬಗ್ಗೆ ತಾಲೂಕು ಕಚೇರಿಯಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಅಲ್ಲಿ, ಕೇಲಿ ಇಲ್ಲಿ ಕೇಳಿ ಅಂತಾ ಇದ್ದಾರೆ.. ನಮಗೆ ಹಕ್ಕು ಪತ್ರದ ಖಾತೆ, ಈ ಸ್ವತ್ತು ಸಿಗ್ತಾ ಇಲ್ಲ ಎಂದು ನಿವೇಶನ ವಂಚಿತರು ತುಮಕೂರಿನ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಬ್ಬೆಗಟ್ಟದ ಅಲೆಮಾರಿ ಜನಾಂಗದವರಿಗೆ ಯಾವ ಸೌಲಭ್ಯವೂ ಸಿಗ್ತಾ ಇಲ್ಲ..ನಮ್ಮ ಗ್ರಾಮಕ್ಕೆ ಒಂದು ಸರಿಯಾದ ರಸ್ತೆ ಇಲ್ಲ , ಆಂಬುಲೆನ್ಸ್ ಕೂಡ ಬರೋದಕ್ಕೆ ಆಗಲ್ಲ . ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದೇ ಮಗು ಸಾವನ್ನಪ್ಪಿದೆ. ನಮ್ಮ ಹಕ್ಕು ಪತ್ರಕ್ಕೆ ಬೆಲೆ ಸಿಗಬೇಕಿದೆ ಎಂದು ಆಗ್ರಹಿಸಿ ಇಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ಕೂಡಲೇ ಡಿಸಿ, ಶಾಸಕ ಸುರೇಶ್ ಬಾಬು ಅವರು ನಮ್ಮ ಗ್ರಾಮಕ್ಕೆ ಬೇಟಿ ನೀಡಿ ಅವರು ನೀಡಿರುವ ಹಕ್ಕು ಪತ್ರಗಳ ಸರ್ವೇ ನಂಬರ್ ಗೆ ಖಾತೆ ಇ ಸ್ವತ್ತು ಸಿಗದೆ ಇರೋದರ ಬಗ್ಗೆ ಪರಿಶೀಲಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದು ಮೌನವಾಗಿ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿದ್ರು.