PAVAGADA: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದ ವೈದ್ಯರು, ರೋಗಿಗಳ ಪರದಾಟ

ಪಾವಗಡ ತಾಲೂಕು ಆಸ್ಪತ್ರೆ
ಪಾವಗಡ ತಾಲೂಕು ಆಸ್ಪತ್ರೆ
ತುಮಕೂರು

 ಪಾವಗಡ:

ಸ್ಮಾರ್ಟ್‌ ಸಿಟಿ, ಗ್ರೇಟರ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ತುಮಕೂರು ಜಿಲ್ಲಾಸ್ಪತ್ರೆಯ ಕರ್ಮಕಾಂಡವನ್ನು ನಿಮ್ಮ ಪ್ರಜಾಶಕ್ತಿ ತೆರೆದಿಡುತ್ತಲೇ ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆಯ ಬಗ್ಗೆ ಪ್ರಜಾಶಕ್ತಿ ವರದಿ ಮಾಡುತ್ತಲೇ ಬಂದಿದ್ರು ಕೂಡ ಎಚ್ಚೆತ್ತುಕೊಳ್ಳುವ ಪ್ರಯತ್ನ ಮಾತ್ರ ಮಾಡ್ತಾ ಇಲ್ಲ. ಕಳೆದ ವಾರವಷ್ಟೇ ಜಿಲ್ಲಾಸ್ಪತ್ರೆಯಲ್ಲಿ ಸುದ್ದಿ ಮಾಡಲು ಹೋದ ನಮ್ಮ ವರದಿಗಾರರ ಮೇಲೆಯೇ ದಬ್ಬಾಳಿಕೆ ಮಾಡಿರುವ ಪ್ರಸಂಗವು ಜರುಗಿತ್ತು. ಜಿಲ್ಲಾಸ್ಪತ್ರೆಯ ಸ್ಥಿತಿಯೇ ಹೀಗಾದ್ರೆ ಇನ್ನು ತಾಲೂಕು ಆಸ್ಪತ್ರೆಗಳ ಸ್ಥಿತಿ ಹೇಗಿದೆ ಅನ್ನೋ ಪ್ರಶ್ನೆ ಪ್ರಜಾಶಕ್ತಿ ಟೀಂಗೆ ಕಾಡತೊಡಗಿತು. ಈ ಬೆನ್ನಲ್ಲೇ ತುಮಕೂರಿನ ಎಲ್ಲಾ ತಾಲೂಕುಗಳ ಸರ್ಕಾರಿ ಆಸ್ಪತ್ರೆಯ ಸ್ಥಿತಿ ಹೇಗಿದೆ ಅಂತಾ ಪ್ರಜಾಶಕ್ತಿ ರಿಯಾಲಿಟಿ ಚೆಕ್‌ಗೆ ಇಳಿದಿದ್ದು . ಆಸ್ಪತ್ರೆಗಳು ಅವ್ಯವಸ್ಥೆಯಿಂದ ಕೂಡಿರುವ ಬಗ್ಗೆ ಬಯಲಾಗಿದೆ.

ತುಮಕೂರು ಜಿಲ್ಲೆಯ ಗಡಿ ತಾಲೂಕಾದ ಪಾವಗಡ ತಾಲೂಕು ಆಸ್ಪತ್ರೆಯಲ್ಲಿಯೂ ಕೂಡ ಅಕ್ಷರಶಃ ಅವ್ಯವಸ್ಥೆಯ ಆಗರವಾಗಿದೆ. ಆಸ್ಪತ್ರೆಯಲ್ಲಿ ಒಂದ್ಕಡೆ ವೈದ್ಯರ ಕೊರತೆ ಆದ್ರೆ, ಮತ್ತೋಂದ್ಕಡೆ ಔಷಧಿಯ ಕೊರತೆ. ಈ ಮಧ್ಯೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ರೋಗಿಗಳ ಪರದಾದುವಂತಹ ಸ್ಥಿತಿ ನಿರ್ಮಾಣ ಆಗಿದೆ.

ಇನ್ನು ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ದಂತ ವೈದ್ಯರು ಹಾಗೂ ಕೀಲು- ಮೂಳೆ ವೈದ್ಯರು ಸೇರಿ ನಾನಾ ವಿಭಾಗದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ.. ಇದ್ರಿಂದ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ದುಡ್ಡು ಇರುವವರು ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾರೆ. ಆದ್ರೆ ಬಡವರು ಎಲ್ಲಿ ಹೋಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಎದ್ದಿದೆ.. ಇರುವ ವೈದ್ಯರೇ ರೋಗಿಗಳಿಗೆ ಚಿಕಿತ್ಸೆ ಕೊಡದೇ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸ್ತಾ ಇದ್ದಾರೆ. ಊಟದ ಸಮಯ 1 ಗಂಟೆಯಿಂದ 2 ಗಂಟೆವರೆಗೂ ಇದ್ರೆ ಇವರು ಹನ್ನೆರಡು ಮುಕ್ಕಾಲಿಗೆ ಹೋಗಿ ಮೂರು ಗಂಟೆ ಆದ್ರು ಬರಲ್ಲ. ಹೀಗಾಗಿ ಸೂಕ್ತ ಸಮಯಕ್ಕೆ ವೈದ್ಯರಿಂದ ಚಿಕಿತ್ಸೆಯೂ ಸಿಗಲ್ಲ. ಔಷಧಿಯೂ ಸಿಗಲ್ಲ. ಖಾಸಗಿ ಆಸ್ಪತ್ರೆಗೆ ಹೋಗೋಣ ಅಂದ್ರೆ ಬಡವರಿಗೆ ಸಾಧ್ಯವಾಗೋದಿಲ್ಲ,,, ಹೀಗೆ ಆದ್ರೆ ಬಡವರು ಎಲ್ಲಿ ಹೋಗಬೇಕು ಎಂದು ಆಕ್ರೋಶ ಹೊರಹಾಕ್ತಿದ್ದಾರೆ.

ಅದೇನೆ ಆಗಲಿ, ಸರ್ಕಾರಿ ಆಸ್ಪತ್ರೆಗಳ ಸಮಸ್ಯೆಗಳ ಬಗ್ಗೆ ಪ್ರಜಾಶಕ್ತಿ ಟಿವಿ ಬೆಳಕು ಚೆಲ್ಲಿದ್ದು, ಇನ್ನಾದ್ರು ವೈದ್ಯಾಧಿಕಾರಿಗಳು, ಸರ್ಕಾರ ಸರ್ಕಾರಿ ಆಸ್ಪತ್ರೆಗೆ ಬೇಕಾದ ಸಿಬ್ಬಂದಿಗಳನ್ನು ನೇಮಿಸಿಕೊಂಡು ಬಡವರ ಜೀವವನ್ನು ರಕ್ಷಣೆ ಮಾಡಬೇಕಿದೆ.

 

Author:

...
Sub Editor

ManyaSoft Admin

share
No Reviews