ಬೆಳಗಿನ ಸಮಯದಲ್ಲಿ ಚರ್ಮದ ಆರೈಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ರಾತ್ರಿ ಸಮಯದಲ್ಲಿಯು ಆರೈಕೆ ಮಾಡಬೇಕು. ಈ ಸಮಯದಲ್ಲಿ ಚರ್ಮ ಕೋಶಗಳು ಹೆಚ್ಚು ಉತ್ತಮ ಪ್ರಯೋಜನಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾದರೆ ರಾತ್ರಿ ಸಮಯದಲ್ಲಿ ಯಾವ ರೀತಿಯ ಚರ್ಮದ ಆರೈಕೆ ಇರಬೇಕು ಎಂಬುದನ್ನು ತಿಳಿಯಿರಿ. ಹಗಲಿನ ಸಮಯದಲ್ಲಿ ಪರಿಸರ ಆಕ್ರಮಣಕಾರಿಗಳಿಂದ ಹಾಗು ಯು.ವಿ ಕಿರಣಗಳಿಂದ ನಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ರಕ್ಷಿಸಲು ಅನೇಕ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ಹಾಗೆಯೇ ರಾತ್ರಿ ದಿನಚರಿಯು ತ್ವಚೆಯ ಚರ್ಮದ ಕೋಶವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ. ನಿದ್ರೆಯ ಸಮಯದಲ್ಲಿ ಸೌಂದರ್ಯ ಉತ್ಪನ್ನಗಳು ಹೆಚ್ಚು ಪ್ರಯೋಜನಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.
೧. ಮೇಕಪ್ ತೆಗೆಯಿರಿ : ಮುಖ್ಯವಾಗಿ ಮೇಕಪ್ ಧರಿಸಿದ ತ್ವಚೆಯಿಂದ ಮಲಗುವುದು ಆರೋಗ್ಯಕರವಾದ ತ್ವಚೆಯನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದೇ ಅರ್ಥ. ಹಲವು ರಾಸಾಯನಿಕ ಉತ್ಪನ್ನಗಳು ರಾತ್ರಿಯ ಸಮಯದಲ್ಲಿ ಅನೇಕ ಸೂಕ್ಷ್ಮವಾದ ಚರ್ಮ ಸಮಸ್ಯೆಗೆ ಕಾರಣವಾಗಬಹುದು. ನಿಮ್ಮ ಮುಖವನ್ನು ಶುದ್ಧವಾದ ಹತ್ತಿಯ ಸಹಾಯದಿಂದ ಮೇಕಪ್ ತೆಗೆಯಿರಿ. ಇದರಿಂದಾಗಿ ನಿಮ್ಮ ತ್ವಚೆಯ ಮೇಲಿರುವ ಬೇಡವಾದ ರಾಸಾಯನಿಕಗಳಿಂದ ಮುಕ್ತಿ ಹೊಂದಿ, ಕಾಂತಿಯುತ ಹಾಗೂ ಆರೋಗ್ಯಕರವಾದ ತ್ವಚೆಯನ್ನು ಪಡೆಯಲು ಸಹಕಾರಿಯಾಗುತ್ತದೆ.
ನಿಮ್ಮ ಮೇಕಪ್ ತೆಗೆದು ಹಾಕಲು ಮಾರುಕಟ್ಟೆಯಲ್ಲಿ ಅನೇಕ ಮೇಕಪ್ ರಿಮೂವ್ ಲಭ್ಯವಿದೆ. ನೈಸರ್ಗಿಕವಾಗಿ ನೀವು ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಿಂದ ಕೂಡ ನಿಮ್ಮ ಮೇಕಪ್ ತೆಗೆಯಬಹುದು.
೨. ಕ್ಲೆನ್ಸರ್ : ಮೇಕಪ್ ರಿಮೂವ್ ಮಾಡಿದ ನಂತರದ ಹಂತವೆಂದರೆ ಅದು, ಕ್ಲೆನ್ಸರ್. ನಿಮ್ಮ ಚರ್ಮಕ್ಕೆ ಸೂಕ್ತವಾದ ಕ್ಲೆನ್ಸರ್ ಬಳಸಿ. ಕ್ಲೆನ್ಸರ್ ಮಾಡುವ ವಿಧಾನವೆಂದರೆ, ಮೊದಲು ನಿಮ್ಮ ಚರ್ಮಕ್ಕೆ ಸ್ವಲ್ಪ ನೀರನ್ನು ಚಿಮುಕಿಸಿ ನಂತರ ಸ್ವಲ್ಪ ಕ್ಲೆನ್ಸರ್ ನಿಮ್ಮ ಚರ್ಮದ ಮೇಲೆ ಅನ್ವಯಿಸಿ ಮಸಾಜ್ ಮಾಡಿ. ಇದರಿಂದ ಚರ್ಮದ ಮೇಲೆ ಕುಳಿತಿರುವ ಎಲ್ಲಾ ಕೊಳಕು , ಹೆಚ್ಚುವರಿ ಎಣ್ಣೆ ಮತ್ತು ಮೇಕ್ ಆಪ್ ತೊಡೆದು ಹಾಕಲು ಸಹಾಯ ಮಾಡುತ್ತದೆ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಶುದ್ಧವಾಗಿ ತೊಳೆಯಿರಿ.
೩. ಟೋನರ್ ಬಳಸಿ : ಟೋನರ್ ಬೆಳಗಿನ ಸಮಯ ಹಾಗು ರಾತ್ರಿಯ ಸಮಯದಲ್ಲಿ ಬಳಸುವುದು ಒಂದು ಪ್ರಮುಖವಾದ ಹಂತವಾಗಿದೆ. ಇದು ಮರು ಹೈಡ್ರೇಟ್ ಮಾಡುವ ವಿಧಾನವಾಗಿದೆ. ತ್ವಚೆಯನ್ನು ಸ್ವಚ್ಛವಾಗಿ ಕ್ಲೆನ್ಸರ್ ಮಾಡಿದ ನಂತರ ನಿಮ್ಮ ಚರ್ಮಕ್ಕೆ ಸರಿಹೊಂದುವ ಟೋನರ್ ಅನ್ನು ಬಳಕೆ ಮಾಡಿ. ಮುಖ್ಯವಾಗಿ ಆಲ್ಕೋಹಾಲ್ ರಹಿತ ಟೋನರ್ ಬಳಕೆ ಚರ್ಮಕ್ಕೆ ಸೂಕ್ತವಾದುದು. ಶುದ್ಧವಾದ ಹತ್ತಿಯ ಸಹಾಯದಿಂದ ಕೆಲವು ಹನಿ ಟೋನರ್ ನಿಮ್ಮ ತ್ವಚೆ ಹಾಗು ಕುತ್ತಿಗೆಯ ಭಾಗಕ್ಕೆ ನಿಧಾನವಾಗಿ ಅನ್ವಯಿಸಿ.
೪. ಸೀರಮ್ : ಸೀರಮ್ ಬಳಸುವುದರಿಂದ ತ್ವಚೆಯ ಮೇಲಿರುವ ಬೇಡವಾದ ಮೊಡವೆಗಳು ಮತ್ತು ಸುಕ್ಕುಗಳಿಂದ ವಿಮುಕ್ತಿ ಹೊಂದಬಹುದು. ಸುಕ್ಕು ರಹಿತ ತ್ವಚೆಯ ಆರೋಗ್ಯಕರವಾಗಿ ಹಾಗೂ ಯೌವನದಿಂದ ಕೂಡಿರುತ್ತದೆ. ಸೀರಮ್ ಗಳು ನಿಮ್ಮ ಆಯ್ಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಹೈಡ್ರೇಟಿಂಗ್ ಸೀರಮ್, ಗ್ಲೋಯಿಂಗ್ ಸೀರಮ್ ಗಳನ್ನು ಬಳಸುವುದರಿಂದ ಚರ್ಮದ ಮೇಲಿರುವ ಕಲೆಗಳು ಹಂತ ಹಂತವಾಗಿ ಕಡಿಮೆಯಾಗುತ್ತದೆ.
೫. ಕಣ್ಣಿನ ಕ್ರೀಮ್ : ಬಹುತೇಕರು ತಮ್ಮ ಕಣ್ಣಿನ ಸುತ್ತ ಕಪ್ಪು ವರ್ತುಲಕಾರವನ್ನು ಹೊಂದಿರುತ್ತಾರೆ. ಅಂತಹವರು ರಾತ್ರಿಯ ಸಮಯದಲ್ಲಿ ಅಂಡರ್ ಐ ಕ್ರೀಮ್ ಅನ್ವಯಿಸಬೇಕು. ರಾತ್ರಿ ಸಮಯದಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಅಷ್ಟೇ ಅಲ್ಲದೇ, ಕಣ್ಣಿನ ಕೆಳಗೆ ಉಂಟಾಗುವ ಸುಕ್ಕುಗಳು ಕೂಡ ಇದರಿಂದ ಕಡಿಮೆಯಾಗುತ್ತದೆ. ನಿಷ್ಕಾರಣವಾಗಿ ಕಣ್ಣಿನ ಸೌಂದರ್ಯ ಕಳೆದುಕೊಳ್ಳಲು ಕಾರಣವೆನೆಂದರೆ, ಸರಿಯಾಗಿ ಮಾಯಿಶ್ಚರೈಸರ್ ಮಾಡದೇ ಇರುವುದು, ಸನ್ ಸ್ಕ್ರೀನ್ ಅನ್ವಯಿಸದೇ ಇರುವುದು. ದಿನಚರಿಯಲ್ಲಿ ಉತ್ತಮ ಐ ಕ್ರೀಮ್ ಬಳಸುವುದರಿಂದ ಕಣ್ಣಿನ ಪ್ರದೇಶಕ್ಕೆ ವಿಶ್ರಾಂತಿ ಹಾಗು ತೇವಗೊಳಿಸಿ, ನಯವಾದ ಹಾಗು ಸುಕ್ಕು ರಹಿತ ಕಣ್ಣುಗಳನ್ನು ಪಡೆಯಬಹುದು.
೬. ಕೊನೆಯದಾಗಿ ಮಾಯಿಶ್ಚರೈಸರ್ : ನಿಮ್ಮ ಚರ್ಮ ಯಾವುದೇ ಬಗೆಯಾಗಿರಲಿ ಮಾಯಿಶ್ವರೈಸರ್ ಅತಿ ಮುಖ್ಯವಾದುದು. ಇದನ್ನು ಪ್ರತಿದಿನ ಬೆಳಗಿನ ಸಮಯ ಅಥವಾ ರಾತ್ರಿಯ ಸಮಯದಲ್ಲಿ ಬಳಸುವುದರಿಂದ ಆರೋಗ್ಯಕರವಾದ ಹಾಗು ಕಾಂತಿಯುತ ಚರ್ಮವನ್ನು ಪಡೆಯಬಹುದಾಗಿದೆ. ಇದು ನಿಮ್ಮ ಚರ್ಮವನ್ನು ತೇವಾಂಶಗೊಳಿಸುವುದಲ್ಲದೇ ಆರೋಗ್ಯಕರವಾಗಿಸುತ್ತದೆ.