Dhoni :
ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರುತುರಾಜ್ ಗಾಯಕ್ವಾಡ್ ಅವರ ಮುಂದಾಳತ್ವದಲ್ಲಿ ಕಣಕ್ಕಿಳಿದಿತ್ತು. ಆದರೆ ರುತುರಾಜ್ ಮೊಣಕೈ ಮೂಳೆ ಮುರಿತಕ್ಕೊಳಗಾಗಿರುವ ಕಾರಣ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಮಹೇಂದ್ರ ಸಿಂಗ್ ಧೋನಿಯೇ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಧೋನಿ ಕೂಡ ಇದೀಗ ಗಾಯಗೊಂಡಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಕಾಣಿಸ್ತಾರಾ ಇಲ್ವಾ ಅನ್ನೋ ಅನುಮಾನ ಮೂಡ್ತಿದೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಧೋನಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಜೊತೆಗೆ ತಂಡವನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈ ಪಂದ್ಯದಲ್ಲಿ ಧೋನಿ ಕಾಲಿನ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿತ್ತು. ಇನ್ನು ಪಂದ್ಯ ಮುಗಿದ ನಂತರವೂ ಧೋನಿ ನೋವಿನಿಂದ ಬಳಲುತ್ತಿದ್ದುದು ಕಾಣಿಸಿತ್ತು. ಜೊತೆಗೆ ಪಂದ್ಯದ ಬಳಿಕ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದ ಧೋನಿ ಕುಂಟುತ್ತಾ ಸಾಗುತ್ತಿದ್ದರು. ಇದು ಸಿಎಸ್‌ಕೆ ಅಭಿಮಾನಿಗಳ ಟೆನ್ಷನ್‌ಗೆ ಕಾರಣವಾಗಿದೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಪರ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು 11 ಎಸೆತ ಎದುರಿಸಿ, 26 ರನ್‌ಗಳನ್ನು ಗಳಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸೇರಿದ್ದವು. ಆದರೆ ಇನ್ನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ಧೋನಿ ನಡೆದಾಡೋದಕ್ಕೂ ಪರದಾಡಿದ್ದರು. ಇದು ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ನ ತಲೆನೋವಿಗೆ ಕಾರಣವಾಗಿತ್ತು.
ಈಗಾಗಲೇ ಗಾಯದ ಕಾರಣದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಸಿಎಸ್‌ಕೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸುತ್ತಿದ್ದಾರೆ. ಇದೀಗ ಅವರು ಕೂಡ ಗಾಯಗೊಂಡಿರುವುದು CSK ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ. ಸಿಎಸ್‌ಕೆ ತಂಡವು ತನ್ನ ಮುಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ದ ಆಡಲಿದ್ದು, ಈ ಪಂದ್ಯಕ್ಕೆ ಧೋನಿ ಫಿಟ್ ಆಗ್ತಾರೋ ಇಲ್ವೋ ಅನ್ನೋದನ್ನು ಕಾದು ನೋಡಬೇಕಿದೆ.