PAVAGADA: ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ

ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌
ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌
ತುಮಕೂರು

ಪಾವಗಡ

ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಸುಮ್ಮನೆ ಕೂರಲ್ಲ ಅನ್ನೋದನ್ನ ಸಾಬೀತು ಪಡಿಸುತ್ತಲೇ ಬಂದಿದೆಜನರ ನಾಡಿಮಿಡಿತವಾಗಿನಿಮ್ಮ ಪ್ರಜಾಶಕ್ತಿ ಕಾರ್ಯನಿರ್ವಹಿಸ್ತಾ ಇದ್ದು ಜನರ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮುಟ್ಟಿಸಿ ಸಮಸ್ಯೆ ಪರಿಹರಿಸುವ ಕೆಲಸವನ್ನು ಮಾಡ್ತಾ ಇದೆಮೊನ್ನೆ ತುಮಕೂರಿನ ಗಡಿತಾಲೂಕಾದ ಪಾವಗಡದಲ್ಲಿ ಕುಡಿಯುವ ನೀರಿಗಾಗಿ ಜನರು ಪರಾಡುತ್ತಿದ್ದು,  ಬಗ್ಗೆ ಪ್ರಜಾಶಕ್ತಿ ಟಿವಿ ಸುದ್ದಿ ಬಿತ್ತರಿಸಿತ್ತುವರದಿ ಬೆನ್ನಲ್ಲೇ ಸ್ಥಳಕ್ಕೆ ಡಿಸಿ ಶುಭಕಲ್ಯಾಣ್ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ.

ಪಾವಗಡ ತಾಲೂಕಿನ ರಾಪ್ಟೆ ಗ್ರಾಮ ಪಂಚಾಯ್ತಿಯ ನಾಗೇನಹಳ್ಳಿ ಗ್ರಾಮದಲ್ಲಿ ಕಳೆದ ಕೆಲದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದ್ದು,ಜನರು ಪರದಾಡುತ್ತಿದ್ರು. ಗ್ರಾಮದಲ್ಲಿ ನೀರು ಪೂರೈಸುವ ಬೋರ್ ವೆಲ್  ಮೋಟಾರ್ ಕೆಟ್ಟು ಹೋಗಿದ್ದರಿಂದ ನೀರಿನ ಸಮಸ್ಯೆ ಉದ್ಬವಿಸಿತ್ತುಮೋಟಾರು ರಿಪೇರಿ ಮಾಡುವ ಮೆಕ್ಯಾನಿಕ್ ಗೆ ಗ್ರಾಮ ಪಂಚಾಯ್ತಿ ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದರಿಂದ ಈಗ ಕೆಟ್ಟಿರುವ ಮೋಟಾರ ಅನ್ನು ರಿಪೇರಿ ಮಾಡಲು ಮುಂದಾಗಿರಲಿಲ್ಲ ಇದ್ರಿಂದ ಗ್ರಾಮಸ್ಥರು ನೀರಿಗಾಗಿ ಪಕ್ಕದ ಗ್ರಾಮಗಳಿಗೆ ಟ್ರ್ಯಾಕ್ಟರ್ ಮೂಲಕ ಡ್ರಮ್, ಕ್ಯಾನ್ ಗಳಲ್ಲಿ ನೀರು ತರ್ತಾ ಇದ್ರು... ಆದ್ರೆ ಕೆಲವರು ನೀರು ತರಲು ಶಕ್ತವಾಗದೇ ಸಂಕಷ್ಟಕ್ಕೆ ಸಿಲುಕಿದ್ರು

 ಬಗ್ಗೆ ನಿಮ್ಮ ಪ್ರಜಾಶಕ್ತಿ ಸುವಿಸ್ತಾರವಾಗಿ ಸುದ್ದಿ ಮಾಡಿ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿತ್ತುಇನ್ನು ಸುದ್ದಿ ಮಾಡಿ ಎರಡೇ ದಿನದಲ್ಲಿ ನಾಗೇನಹಳ್ಳಿ ಗ್ರಾಮಕ್ಕೆ ಡಿಸಿ ಶುಭಕಲ್ಯಾಣ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆಇದೇ ವೇಳೆ ಡಿಸಿಗೆ  ಮಧುಗಿರಿ ಎಸಿ ಗೋಟುರು ಶಿವಪ್ಪ,  ತಹಸೀಲ್ದಾರ್ ವರದರಾಜು, ಸೇರಿ ಹಲವರು ಸಾಥ್ ನೀಡಿದ್ದಾರೆ.

ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ರಪ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗೇನ ಹಳ್ಳಿಗೆ ಡಿಸಿ ಭೇಟಿ ನೀಡಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು,ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದೇ ವೇಳೆ ಶುದ್ದ ಕುಡಿಯುವ ನೀರಿನ ಘಟಕದಲ್ಲಿಕಾಯಿನ್ ಸಿಸ್ಟಮ್ ಅಳವಡಿಸಬೇಕೆಂದು ಗ್ರಾಮಸ್ಥರು ಡಿಸಿ ಶುಭಕಲ್ಯಣ್ ಬಳಿ ಮನವಿ ಮಾಡಿಕೊಂಡಿದ್ದು, ಕೂಡಲೇ  ವ್ಯವಸ್ಥೆ ಮಾಡಿಕೊಡುವಂತೆ  ಸ್ಥಳದಲ್ಲೇ ಇಂಜಿನಿಯರ್ ಬಸವಲಿಂಗಪ್ಪಗೆ ಸೂಚನೆ ನೀಡಿದ್ದಾರೆ.

ಇದಲ್ಲದೇ ಗ್ರಾಮದಲ್ಲಿ ರಸ್ತೆ ಬದಿಯಲ್ಲಿದ್ದ ತಿಪ್ಪೆ ಮತ್ತು ಕಸದ ರಾಶಿಗಳನ್ನು ಕಂಡ ಸಮರ್ಪಕವಾಗಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಬೇಕು. ರೀತಿ ಇದ್ದರೆ ಜನರಿಗೂ ಕಾಯಿಲೆಗೆ ತುತ್ತಾಗುತ್ತಾರೆಜನವಸತಿ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕೆಂದು,ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯಾದಂತಹ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಪಿಡಿಒ ಸುದರ್ಶನ್ ಗೆ ಖಡಕ್ ಸೂಚನೆ ನೀಡಿದರು 

 

Author:

...
Reporter

ManyaSoft Admin

Ads in Post
share
No Reviews