ಲೈಂಗಿಕ ದೌರ್ಜನ್ಯ ಎಸಗಿದ ಡಿವೈಎಸ್ಪಿ ವಿರುದ್ಧ ಕ್ರಮಕ್ಕೆ ಆಗ್ರಹ. ಪ್ರಗತಿ ಪರ ಸಂಘಟನೆಗಳಿಂದ ಪ್ರತಿಭಟನೆ.

dysp ramachandrappa
dysp ramachandrappa
ತುಮಕೂರು

ತುಕೂರು ಜಿಲ್ಲೆ ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ ರಾಮಚಂದ್ರಪ್ಪ ಇತ್ತೀಚೆಗೆ ಪಾವಗಡ ಮೂಲದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.  ಅವರ ವಿರುದ್ಧ ಕಠಿಣ ಕ್ರಮವಾಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯ್ತು. ಪಾವಗಡ ತಹಶೀಲ್ದಾರ್‌ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ದಲಿತ ಸಂಘಟನೆ, ರೈತ ಸಂಘ ಹಾಗೂ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರಿದ್ದರು.

ಈ ವೇಳೆ ಕರ್ತವ್ಯದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಗ್ರೇಟ್ 2 ತಹಸೀಲ್ದಾರ್  ಚಂದ್ರಶೇಖರ್ ಮೂಲಕ ಮನವಿ ನೀಡಲಾಯ್ತು.ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಪೂಜರಪ್ಪ, ದಲಿತ ಮುಖಂಡ ಕನ್ನಮೇಡಿ ಕೃಷ್ಣಮೂರ್ತಿ, ಜರವಾದಿ ಮಹಿಳಾ ಸಂಘದ ಅಧ್ಯಕ್ಷ ಸುಶೀಲಮ್ಮ,ಶಿವಗಂಗಮ್ಮ, ಅಂಬಿಕಾ ರಮೇಶ್, ಬೇಕರಿ ನಾಗರಾಜು, ಗೋವಿಂದಪ್ಪ, ನಾಗಲಕ್ಷ್ಮಿ ಬಿಕೆ ಹಳ್ಳಿ ಅಲವೇಲಮ್ಮ ವರಲಕ್ಷ್ಮಿ, ಹನುಮಕ್ಕ, ಸುನಂದಾ,ರತ್ನ ಸೇರಿದಂತೆ ಮತ್ತಿತರರು ಹಾಜರಿದ್ದರು

Author:

...
Reporter

ManyaSoft Admin

Ads in Post
share
No Reviews