ದೊಡ್ಡಬಳ್ಳಾಪುರ:
ಕುಂದಾನಗರಿ ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ MES ಪುಂಡನೊಬ್ಬ ಹಲ್ಲೆ ನಡೆಸಿದ್ದು, ಕನ್ನಡ ಪರ ಸಂಘಟನೆಗಳನ್ನು ಕೆರಳಿಸುವಂತೆ ಮಾಡಿದೆ. ಬೆಳಗಾವಿ ಸೇರಿ ಹಲವೆಡೆ ಇಂದು ಕರವೇ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕ್ತಿದ್ದಾರೆ. ಇತ್ತ ದೊಡ್ಡಬಳ್ಳಾಪುರದಲ್ಲೇ ಕರವೇ ಸಂಘಟನೆ ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ರು.
ದೊಡ್ಡಬಳ್ಳಾಪುರದಲ್ಲಿ ಬೀದಿಗಿಳಿದ ಕರವೇ ಪ್ರವೀಣ್ ಶೆಟ್ಟಿ ಬಣ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದ್ರು. ಹೌದು,ದೊಡ್ಡಬಳ್ಳಾಪುರದ ಹೆದ್ದಾರಿಯಲ್ಲಿ ನೆರೆ ರಾಜ್ಯದ ಮಹಾರಾಷ್ಟ್ರದ ಗಾಡಿಗಳನ್ನು ತಡೆದು ಅಲ್ಲಿಂದ ಬರುವಂತ ಚಾಲಕರಿಗೆ ಕನ್ನಡದ ಶಾಲು ಹೊದಿಸಿ ಸಿಹಿ ತಿನ್ನಿಸಿ ಸನ್ಮಾನ ಮಾಡುವ ಮೂಲಕ ಕರವೇ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ರು. ಕರವೇ ಕಾರ್ಯಕರ್ತರ ವರ್ತನೆ ಕಂಡು ಕೆಲ ವಾಹನ ಚಾಲಕರು ಕೆಲ ಕಾಲ ವಿಚಲಿತರಾದ್ರು.