CHITRADURGA -ಇಂದು ಗಂಡು ಮಗುವಿನ ಜೊತೆ ಗಂಡನ ಮನೆಗೆ ಬಂದ ರೇಣುಕಾಸ್ವಾಮಿ ಪತ್ನಿ

ಸ್ಯಾಂಡಲ್​ವುಡ್​ ನಟ ದರ್ಶನ್​ ಅಂಡ್​ ಗ್ಯಾಂಗ್‌ಗೆ ಸಂಕಷ್ಟ ತಂದು ಜೈಲು ಪಾಲಾಗುವಂತೆ ಮಾಡಿದ್ದು ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಅಟ್ಟಹಾಸಕ್ಕೆ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಅನ್ನೋದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು. ಇದೀಗ ಮೃತ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಸಡಗರ  ಮನೆ ಮಾಡಿದೆ. ಇಂದು  ರೇಣುಕಾಸ್ವಾಮಿ ಮಗನ ನಾಮಕರಣ ಸಮಾರಂಭ. 5 ತಿಂಗಳ ಬಳಿಕ ಮೊದಲ ಬಾರಿ ರೇಣುಕಾಸ್ವಾಮಿಯ ಮಗ ತನ್ನ ತಂದೆಯ ಮನೆಗೆ ಆಗಮಿಸಿದ್ದಾರೆ. ರೇಣುಕಾಸ್ವಾಮಿ, ಸಹನಾ ದಂಪತಿಯ ಪುತ್ರನಿಗೆ ಇಂದು ನಾಮಕರಣ ಶಾಸ್ತ್ರ ನೆರವೇರುತ್ತಿದೆ.

ಕಳೆದ 8 ತಿಂಗಳ ಹಿಂದೆ ರೇಣುಕಾಸ್ವಾಮಿ ಸಾವನ್ನಪ್ಪಿದಾಗ ಪತ್ನಿ ಸಹನಾ ಗರ್ಭಿಣಿಯಾಗಿದ್ದರು. 5 ತಿಂಗಳ ಹಿಂದೆ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಂದು ಮಗುವಿನ ಜೊತೆ ರೇಣುಕಾಸ್ವಾಮಿ‌ ಪತ್ನಿ ಗಂಡನ ಮನೆಗೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕೇಸ್‌ ಇನ್ನು ಕೂಡ ಮುಗಿದಿಲ್ಲ. ಆದರೆ ಘಟನೆ ಕಳೆದು ತಿಂಗಳುಗಳೇ ಉರುಳಿ ಹೋದವು. ಆರೋಪಿಗಳು ಜಾಮೀನಿನ ಮೇಲೆ ರಿಲೀಸ್‌ ಆಗಿ ಬಂದರು. ಈಗ ರೇಣುಕಾಸ್ವಾಮಿ ಮನೆಯಲ್ಲಿ ಮಗನ ಸಾವಿನ ಎಷ್ಟೋ ತಿಂಗಳ ನಂತರ ಸಂಭ್ರಮ ಮನೆಮಾಡಿದೆ.

ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸದಲ್ಲಿ ನಾಮಕರಣ ಶಾಸ್ರ್ತ ನಡೆಯಲಿದ್ದು, ಮಗುವಿಗೆ  5 ತಿಂಗಳು ತುಂಬಿದ ಹಿನ್ನೆಲೆ ನಾಮಕರಣ ಶಾಸ್ರ್ತ ಮಾಡಿಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಮಗನ ಸಾವಿನ ಬಳಿಕ ಮೊಮ್ಮಗನ ಶುಭ ಸಮಾರಂಭಕ್ಕೆ ತಂದೆ ತಾಯಿ ಸಂತಸ ಪಡುತ್ತಿದ್ದಾರೆ. ರೇಣುಕಾಸ್ವಾಮಿ ಮಗನ ಆಗಮನದಿಂದ ಇಡೀ ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ.

 

Author:

...
Editor

ManyaSoft Admin

Ads in Post
share
No Reviews