ಕಾಡ್ಗಿಚ್ಚಿನ ಪರಿಣಾಮ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಸಮೀಪದ ಮಾವಿನಹೊಳ-ಬಲಿಗೆ ಗುಡ್ಡದಲ್ಲಿ ನಡೆದಿದೆ.
ನೆನ್ನೆ ಸಂಜೆ ಕಾಡಿಗೆ ಬೆಂಕಿ ಹಬ್ಬಿದ್ದುಕಾಡು ಹೊತ್ತಿ ಉರಿದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆದರೂ ಗಾಳಿಯ ವೇಗಕ್ಕೆ ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಲೇ ಇತ್ತು.
ಕೊನೆಗೂ ಅರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ಜೊತೆ ಸಸ್ಯಸಂಪತ್ತು ನಾಶವಾಗಿರುವ ಜೊತೆಗೆ ಪ್ರಾಣಿ ಪಕ್ಷಿಗಳು ಕೂಡ ಸುಟ್ಟುಕರಕಲಾಗಿವೆ.