ಚಿಕ್ಕಬಳ್ಳಾಪುರ : ಮೀನು ಹಿಡಿಯಲು ಹೋಗಿ ನೀರು ಪಾಲಾದ ಬಾಲಕ..!

ಸಾರ್ವಜನಿಕ ಆಸ್ಪತ್ರೆ ಚಿಂತಾಮಣಿ
ಸಾರ್ವಜನಿಕ ಆಸ್ಪತ್ರೆ ಚಿಂತಾಮಣಿ
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ :

ಮೀನು ಹಿಡಿಯಲು ಹೋಗಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ನೆಕ್ಕುಂದಿ ಪೇಟೆ ಎಂಬಲ್ಲಿ ನಡೆದಿದೆ.

14 ವರ್ಷದ ಚರಣ್‌ ಬಿನ್‌ ಅನಿಲ್‌ ಕುಮಾರ್‌ ಎಂಬಾತ ಮೃತ ಬಾಲಕನಾಗಿದ್ದಾನೆ, ಈತ ಚಿಂತಾಮಣಿ ನಗರದ ವಾರ್ಡ್‌ ನಂಬರ್‌ 27 ರ ಶಾಂತಿನಗರದ ನಿವಾಸಿಯಾಗಿದ್ದು, ನಗರದ ಎಸ್‌ ಆರ್‌ ಇಟಿ ಎಂಬ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಸ್ನೇಹಿತರ ಜೊತೆ ನೆಕ್ಕುಂದಿ ಪೇಟೆಯ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾನೆ, ಆತನ ಸ್ನೇಹಿತರ ಕಿರುಚಾಟವನ್ನು ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಅಸ್ವಸ್ಥನಾಗಿದ್ದ ವಿದ್ಯಾರ್ಥಿಯನ್ನು ಕೂಡಲೇ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದ ಕೂಡಲೇ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Author:

...
Editor

ManyaSoft Admin

Ads in Post
share
No Reviews