ಕಾನ್ 2025 | ನನಗೆ ಫಹಾದ್ ಫಾಸಿಲ್ ಆ್ಯಕ್ಟಿಂಗ್ ಇಷ್ಟ ಎಂದ ಆಲಿಯಾ ಭಟ್‌

CANNES :ಬಾಲಿವುಡ್ ನಟಿ ಆಲಿಯಾ ಭಟ್ ಅವರು 2025ರ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ದಕ್ಷಿಣ ಭಾರತೀಯ ನಟ ಫಹಾದ್ ಫಾಸಿಲ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ "ನೆಚ್ಚಿನ ನಟ ಯಾರು?" ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನನಗೆ ಫಹಾದ್ ಫಾಸಿಲ್ ಅವರ ಅಭಿನಯ ಬಹಳ ಇಷ್ಟ. ‘ಆವೇಶಂ’ ನನ್ನ ನೆಚ್ಚಿನ ಚಿತ್ರಗಳಲ್ಲಿ ಒಂದು. ಅವರು ಅದ್ಭುತ ನಟ. ಅವರೊಂದಿಗೆ ಕೆಲಸ ಮಾಡುವ ಕನಸು ಇದೆ," ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಮಲಯಾಳಂ ಸಿನಿಮಾಗಳ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ಆಲಿಯಾ, ತಮ್ಮ ‘ಡಾರ್ಲಿಂಗ್ಸ್’ ಸಿನಿಮಾದಲ್ಲಿ ನಟಿಸಿದ ರೋಷನ್ ಮ್ಯಾಥ್ಯು ಅವರ ಪ್ರತಿಭೆಯನ್ನೂ ಹೊಗಳಿದ್ದಾರೆ. ಅವರ ಮಾತುಗಳು ಮಲಯಾಳಂ ಪ್ರೇಕ್ಷಕರ ಹೃದಯ ಗೆದ್ದಿವೆ.

 

 

Author:

...
Keerthana J

Copy Editor

prajashakthi tv

share
No Reviews