ಮೊಡವೆ ಉಂಟಾಗಲು ಅನೇಕ ಕಾರಣಗಳಿವೆ. ಹಾರ್ಮೋನುಗಳ ಬದಲಾವಣೆ, ವೈದ್ಯಕೀಯ ಕಾರಣಗಳು ಮತ್ತು ಜೀವನಶೈಲಿಯ ಅಂಶಗಳು ಸಾಮಾನ್ಯವಾಗಿ ಮೊಡವೆ ಉಂಟಾಗಲು ಕಾರಣವಾಗಿರುತ್ತವೆ.ನಿಮ್ಮದು ಯಾವುದೇ ರೀತಿಯ ಚರ್ಮವಿರಿ ಅಥವಾ ವಯಸ್ಸಿರಲಿ ,ಒಮ್ಮೆಯೂ ಮೊಡವೆ ಆಗಿಲ್ಲ ಎಂಬವರು ಇರಲು ಸಾಧ್ಯವಿಲ್ಲ. ಆದರೆ ಮೊಡವೆ ಆಗುವುದನ್ನುಯಾರೂ ಬಯಸುವುದಿಲ್ಲ. ಆ ಮೊಡವೆಗಳ ಗಾತ್ರವನ್ನು ಕೆಲವೇ ಗಂಟೆಗಳಲ್ಲಿ ಕಡಿಮೆ ಮಾಡುವ ಅಥವಾ ಕೆಲವೇ ದಿನಗಳಲ್ಲಿ ನಿವಾರಿಸುವ ಕೆಲವೊಂದು ಪರಿಹಾರೋಪಾಯಗಳು ಇಲ್ಲಿವೆ.
*ಟೀ ಟ್ರೀ ತೈಲ
ಟೀ ಟ್ರೀ ತೈಲಗಳು ತಮ್ಮ ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳಿಗೆ ಹೆಸರುವಾಸಿ. ಎರಡು ಹನಿ ಟೀ ಟ್ರೀ ತೈಲವನ್ನು ತೆಂಗಿನ ಎಣ್ಣೆ ಅಥವಾ ಇನ್ನಾವುದೇ ಚರ್ಮಕ್ಕೆ ಉಪಯೋಗಕಾರಿಯಾದ ತೈಲದೊಂದಿಗೆ ಮಿಶ್ರ ಮಾಡಿರಿ. ಅದನ್ನು ಮೊಡವೆಗೆ ಲೇಪಿಸಿ, ಕೆಲವು ಸಮಯದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ.
*ಆಲೋವೆರ
ಇಡೀ ವಿಶ್ವದಲ್ಲಿ ಚರ್ಮದ ಆರೈಕೆಯ ಪ್ರಮುಖ ಸಾಮಾಗ್ರಿಯಾಗಿ ಲೋಳೆಸರ (ಅಲೋವೇರಾ) ಹೆಸರುವಾಸಿ. ತಾಜಾ ಅಲೋವೇರಾ ಜೆಲ್ ರಾತ್ರಿ ಬೆಳಗಾಗುವುದರ ಒಳಗೆ ಮೊಡವೆ ಸಮಸ್ಯೆಯನ್ನು ಪರಿಹರಿಸಬಲ್ಲದು.
*ಜೇನು ತುಪ್ಪ
ಮೊಡವೆಯಿಂದ ಹಾನಿಗೊಂಡ ಚರ್ಮಕ್ಕೆ ಜೇನು ತುಪ್ಪ ಲೇಪಿಸುವುದರಿಂದ ಬಹಳ ಪ್ರಯೋಜನ ಇದೆ. ಅದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳು ಉರಿಯೂತನ್ನು ತಗ್ಗಿಸಿ, ಬೇಗ ಗುಣಮುಖವಾಗಲು ಸಹಕರಿಸುತ್ತದೆ. ಹಾನಿಗೊಂಡ ಜಾಗಕ್ಕೆ ರಾತ್ರಿ ಒಂದು ಅಥವಾ ಎರಡು ಹನಿ ಜೇನು ತುಪ್ಪ ಲೇಪಿಸಿ ಮತ್ತು ಅದನ್ನು ಬೆಳಗ್ಗೆ ತೊಳೆದುತೆಗೆಯಿರಿ
*ಪುಡಿ ಮಾಡಿದ ಆಸ್ಪಿರಿನ್
ಮೊಡವೆಗಳು ನಿಮಗೆ ತಲೆನೋವು ನೀಡಲು ಬಿಡಬೇಡಿ. ಬದಲಿಗೆ ನೀವೇ ಅಸ್ಪಿರಿನ್ ಗುಳಿಗೆಯನ್ನು ನುಣ್ಣಗೆ ಪುಡಿ ಮಾಡಿ, ಅದಕ್ಕೆ ಒಂದೆರಡು ಹನಿ ನೀರು ಸೇರಿಸಿ, ಪೇಸ್ಟ್ ತಯಾರಿಸಿ, ಮೊಡವೆಗಳಿಗೆ ಲೇಪಿಸಿಕೊಳ್ಳಿ. ಅದರಲ್ಲಿರುವ ಉರಿಯೂತ ನಿವಾರಕ ಅಂಶಗಳು, ಚರ್ಮ ಸಮಸ್ಯೆಯನ್ನು ಕಡಿಮೆ ಮಾಡಬಲ್ಲವು.
*ಮಂಜುಗಡ್ಡೆ
ಮಂಜುಗಡ್ಡೆಯ ತುಂಡನ್ನು ಒಂದು ಒಳ್ಳೆಯ ಬಟ್ಟೆಯಲ್ಲಿ ಸುತ್ತಿ, ಮೊಡವೆ ಇರುವ ಜಾಗಕ್ಕೆ ಇಡಿ. ಮಂಜುಗಡ್ಡೆಯನ್ನು ನೇರವಾಗಿ ಚರ್ಮಕ್ಕೆ ಇಡಬೇಡಿ ಅಥವಾ ಒಂದೇ ಜಾಗದಲ್ಲಿ 20 ನಿಮಿಷಗಳ ಕಾಲ ಇಡಬೇಡಿ. ನೀವು ಎರಡು ದಿನಕ್ಕೊಮ್ಮೆ ಇದನ್ನು ಮಾಡಬಹುದು.