ಬುದ್ದಿವಾದ ಹೇಳಿದ ತಾಯಿಯನ್ನ ಕೊಲೆ ಮಾಡಿದ ಮಗನಿಗೆ ಜೀವಾವಧಿ ಶಿಕ್ಷೆ

ತುಮಕೂರು : ಬುದ್ದಿವಾದ ಹೇಳಿದ್ದ ತಾಯಿ ಜಯಮ್ಮನ್ನ  2021 ಜನವರಿ 15ರಂದು ರಾತ್ರಿ ತನ್ನ ಮಗ ವಿರೂಪಾಕ್ಷ  ಕೊಲೆ ಮಾಡಿದ್ದ ಘಟನೆ ಕುಣಿಗಲ್ ತಾಲ್ಲೂಕು ಹಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ, ಕೆಲಸ ಮಾಡದೆ ಮನೆಯಲ್ಲೇ ಇರುತ್ತಿದ್ದ ವಿರುಪಾಕ್ಷ ಹಣ ನೀಡುವಂತೆ ಪದೇ ಪದೇ ತಾಯಿಯನ್ನ ಪೀಡಿಸಿ ಗಲಾಟೆ ಮಾಡುತ್ತಿದ್ದ ಹಣ ನೀಡಲು ನಿರಾಕರಿಸಿ ಜಯಮ್ನ ಬುದ್ಧಿವಾದ ಹೇಳಿ ರಾತ್ರಿ ಮಲಗಿದ್ದರು ಈ ವೇಳೆ  ತಲೆ ಮೇಲೆ ಖಾರ ಅರೆಯುವ ಗುಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ

 

ಈ ಸಂಬಂಧ‌ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿತ್ತು. ಅಂದಿನ ಸಿಪಿಐ ಗುರುಪ್ರಸಾದ್ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪಣ ವರದಿ ಸಲ್ಲಿಸಿದ್ದರು. ವಾದ ವಿವಾದ ಆಲಿಸಿದ ತುಮಕೂರು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾ. ವೈ.ಎಲ್ ಲಡಖಾನ್ ಶಿಕ್ಷೆ ಅಪರಾಧಿ ವಿರುಪಾಕ್ಷಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದ್ದಾರೆ

 ಐಪಿಸಿ 302 ಅಡಿಯಲ್ಲಿ ಕಠಿಣ ಕಾರಾಗೃಹ  ಶಿಕ್ಷೆ ಹಾಗೂ 50 ಸಾವಿರ ದಂಡವನ್ನು ನ್ಯಾಯಾಲಯ ವಿಧಿಸಿದೆ. ಸರ್ಕಾರಿ ವಕೀಲರಾದ ಟಿ.ಆರ ಅರುಣ್ ಹಾಗೂ ಕೆ.ಸಿ ದೀಪಕ್ ವಾದ ಮಂಡಿಸಿದ್ದರು

Author:

...
Shabeer Pasha

Managing Director

prajashakthi tv

share
No Reviews