BOLLYWOOD: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಬಾಲಿವುಡ್ ಆ್ಯಕ್ಟರ್ ಅಕ್ಷಯ್ ಕುಮಾರ್

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಅಕ್ಷಯ್ ಕುಮಾರ್
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಅಕ್ಷಯ್ ಕುಮಾರ್
ಹಿಂದಿ

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ 144 ವರ್ಷಗಳ ನಂತರ ಮಹಾಕುಂಭ ಮೇಳೆ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು ೬೦ ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ.  44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ 2025 ಜನವರಿ 13 ರಂದು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಿದ್ದು, ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತಿದೆ. 

ಇದೀಗ ಬಾಲಿವುಡ್ ಆ್ಯಕ್ಟರ್ ಅಕ್ಷಯ್ ಕುಮಾರ್ ತ್ರಿವೇಣಿ ಸಂಗಮದಲ್ಲಿ  ಮಿಂದೆದ್ದಿದ್ದಾರೆ. ಪ್ರಯಾಗ್ ರಾಜ್‌ನ ವ್ಯವಸ್ಥೆ ನೋಡಿ ಬೆರಗಾಗಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಧನ್ಯವಾದ ಹೇಳಿದ್ದಾರೆ. ಈ ಸಲದ ವ್ಯವಸ್ಥೆ ಹೇಗೆ ಆಗಿದೆ ಅಂದರೆ, ಅಂಬಾನಿ, ಅದಾನಿ ಕೂಡ ಬಂದು ಹೋಗಿದ್ದಾರೆ. ನಿಜಕ್ಕೂ ಈ ಒಂದು ಪವಿತ್ರ ಸ್ನಾನ ಮಾಡಿ ತುಂಬಾನೆ ಖುಷಿ ಆಗಿದೆ. ಈ ಹಿಂದೆ ಜನ ಎಲ್ಲ ವ್ಯವಸ್ಥೆಯನ್ನ ಮಾಡಿಕೊಂಡು ಬರ್ತಾ ಇದ್ದರು. ಆದರೆ, ಇದೀಗ ಆ ರೀತಿ ಏನೂ ಇಲ್ಲ. ಎಲ್ಲ ವ್ಯವಸ್ಥೆಯನ್ನು ಇಲ್ಲಿ ಮಾಡಿದ್ದಾರೆ. ನಿಜಕ್ಕೂ ಇಲ್ಲಿಗೆ ಬಂದು ತುಂಬಾನೆ ಖುಷಿ ಆಗಿದೆ ಎಂದು ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.

ಇದೀಗ ಮಹಾ ಕುಂಭಮೇಳದ ಕೊನೆಯ ಪುಣ್ಯ ಸ್ನಾನ ಫೆಬ್ರವರಿ 26 ಮಹಾಶಿವರಾತ್ರಿಯಂದು ನಡೆಯಲಿದೆ. ಹೀಗಾಗಿ ಈಗಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಪುಣ್ಯ ಸ್ನಾನ ಮಾಡಿ ಹೋಗುತ್ತಿದ್ದಾರೆ. 

 

Author:

share
No Reviews